ಗುಜರಾತ್: ವಿವಾದದ ಕಿಡಿ ಹೊತ್ತಿಸಿದ ಗಾಂಧಿ ವಿರೋಧಿ ಪದ್ಯ! 

ದೇಶ 75 ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಗಾಂಧಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಗಾಂಧಿ ವಿರೋಧಿ ಪದ್ಯ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 
ಮಹಾತ್ಮ ಗಾಂಧಿ( ಸಂಗ್ರಹ ಚಿತ್ರ)
ಮಹಾತ್ಮ ಗಾಂಧಿ( ಸಂಗ್ರಹ ಚಿತ್ರ)
Updated on

ಅಹ್ಮದಾಬಾದ್: ದೇಶ 75 ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಗಾಂಧಿ ಅವರ ತವರು ರಾಜ್ಯ ಗುಜರಾತ್ ನಲ್ಲಿ ಗಾಂಧಿ ವಿರೋಧಿ ಪದ್ಯ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. 

ಮಧ್ಯಪ್ರದೇಶದ ದೇವಕೃಷ್ಣ ವ್ಯಾಸ್ ಎಂಬುವವರ ಪದ್ಯದ ಒಂದು ಸಾಲಿನಲ್ಲಿ ನೀವು ಸ್ವಾತಂತ್ರ್ಯ ಚಳುವಳಿಯ ನಾಯಕರಾಗಿದ್ದಿರಿ, ಆದರೆ ಆ ಬಳಿಕ ಖಳನಾಯಕ, ಎಂಬ ಸಾಲುಗಳು ವಿವಾದವನ್ನು ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕರು ಪದ್ಯ ಬರೆದಿರುವವರ ವಿರುದ್ಧ ಎಫ್ಐಆರ್ ದಾಖಲು ಮಾಡಲು ಆಗ್ರಹಿಸಿದ್ದಾರೆ.
 
ಅಖಿಲ ಭಾರತೀಯ ಶೈಕ್ಷಿಕ್ ಸಿಂಗ್ ಹಾಗೂ ಗುಜರಾತ್ ಸಾಹಿತ್ಯ ಅಕಾಡೆಮಿಯ ಗುಲಾಬ್ ದಾಸ್ ಅಧ್ಯಯನ ಪೀಠದಿಂದ ನಡೆದ ಕಾರ್ಯಕ್ರಮದಲ್ಲಿ ಈ ಪದ್ಯವನ್ನು ಓದಲಾಗಿತ್ತು. ಸೌರಾಷ್ಟ್ರ ವಿವಿಯಲ್ಲಿ ಅಖಂಡ ಕಾವ್ಯ ಸಮ್ಮೇಳನದ ಭಾಗವಾಗಿ ಈ ಕಾರ್ಯಕ್ರಮ ನಡೆದಿತ್ತು. 

ಕಾರ್ಯಕ್ರಮದಲ್ಲಿ 75 ಕವಿಗಳು ತಮ್ಮ ಪದ್ಯಗಳನ್ನು ನಿರಂತರವಾಗಿ ವಾಚಿಸಿದ್ದರು. ನೇತಾಜಿ ಅವರನ್ನು ಹೇಗೆ ಅವಮಾನ ಮಾಡಿ, ನೆಹರೂ ಅವರಿಗೆ ತಲೆ ಬಾಗಲಾಯಿತು ಎಂಬುದನ್ನೂ ಈ ಪದ್ಯದಲ್ಲಿ ಕವಿ ಬರೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com