ನೇತಾಜಿ ಅಸ್ಥಿಯನ್ನು ಭಾರತಕ್ಕೆ ತನ್ನಿ, ಡಿಎನ್ಎ ಪರೀಕ್ಷೆ ಮಾಡಬಹುದು: ಪುತ್ರಿ ಅನಿತಾ ಬೋಸ್

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತರಬೇಕು ಎಂದು ನೇತಾಜಿ ಅವರ ಏಕೈಕ ಪುತ್ರಿ ಅನಿತಾ ಬೋಸ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅನಿತಾ ಬೋಸ್
ಅನಿತಾ ಬೋಸ್
Updated on

ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತರಬೇಕು ಎಂದು ನೇತಾಜಿ ಅವರ ಏಕೈಕ ಪುತ್ರಿ ಅನಿತಾ ಬೋಸ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

1945 ರ ಆಗಸ್ಟ್ 18 ರಂದು ಸಂಭವಿಸಿದ ಅಪ್ಪನ ಸಾವಿನ ಕುರಿತು ಇನ್ನೂ ಅನುಮಾನಗಳಿವೆ. ನೇತಾಜಿ ಅಸ್ಥಿಯನ್ನು ಭಾರತಕ್ಕೆ ತನ್ನಿ, ಡಿಎನ್ಎ ಪರೀಕ್ಷೆ ಮಾಡಬಹುದು. ಅನಾಮನ ಹೊಂದಿರುವವರಿಗೆ ಡಿಎನ್‌ಎ ಪರೀಕ್ಷೆ ಉತ್ತರ ನೀಡುತ್ತದೆ ಎಂದು ಅನಿತಾ ಬೋಸ್ ಹೇಳಿದ್ದಾರೆ.

ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರಿಸಲಾಗಿರುವ ಅಸ್ಥಿ ನೇತಾಜಿಯವರದೇ ಎಂದು ವೈಜ್ಞಾನಿಕ ಪುರಾವೆಗಳನ್ನು ಪಡೆಯಲು ಡಿಎನ್‌ಎ ಪರೀಕ್ಷೆಯು ಅವಕಾಶವನ್ನು ನೀಡುತ್ತದೆ ಎಂದು ಜರ್ಮನಿಯಲ್ಲಿ ವಾಸಿಸುವ ಆಸ್ಟ್ರಿಯನ್ ಮೂಲದ ಅರ್ಥಶಾಸ್ತ್ರಜ್ಞೆ ಅನಿತಾ ಬೋಸ್ ಅವರು ತಿಳಿಸಿದ್ದಾರೆ.

ಜಪಾನ್ ಸರ್ಕಾರವು ಅಂತಹ ಕಾರ್ಯವಿಧಾನಕ್ಕೆ ಒಪ್ಪಿಗೆ ನೀಡಿದೆ. ನೇತಾಜಿಯ ಏಕೈಕ ಮಗಳಾದ ಅನಿತಾ, ತನ್ನ ತಂದೆ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸಲು ಬದುಕಲಿಲ್ಲವಾದ್ದರಿಂದ, ಅವರ ಅವಶೇಷಗಳಾದರೂ ಭಾರತೀಯ ನೆಲಕ್ಕೆ ಮರಳುವ ಸಮಯ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನವು ಈಗ ಅತ್ಯಾಧುನಿಕ ಡಿಎನ್‌ಎ ಪರೀಕ್ಷೆಗೆ ಸಾಧನಗಳನ್ನು ನೀಡುತ್ತದೆ.  ಅಸ್ಥಿಗಳಿಂದ ಡಿಎನ್‌ಎಯನ್ನು ತೆಗೆಯಬಹುದು. ನೇತಾಜಿಯವರು ಆಗಸ್ಟ್ 18, 1945 ರಂದು ನಿಧನರಾದರು ಎಂದು ಇನ್ನೂ ಅನುಮಾನಿಸುವವರಿಗೆ, ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿ ಇರಿಸಲಾಗಿರುವ ಅಸ್ಥಿಯು ವೈಜ್ಞಾನಿಕ ಪುರಾವೆಗಳನ್ನು ಪಡೆಯಲು ಅವಕಾಶ ನೀಡುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com