ನಿತೀಶ್ ಕುಮಾರ್ ನೇತೃತ್ವದ 'ಮಹಾಘಟಬಂಧನ್' ಸರ್ಕಾರಕ್ಕೆ 31 ಸಚಿವರ ಸೇರ್ಪಡೆ: ಸದ್ಯದಲ್ಲಿಯೇ ಖಾತೆ ಹಂಚಿಕೆ

ಬದಲಾದ ರಾಜಕೀಯ ವಿದ್ಯಮಾನದಲ್ಲಿ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಮಂಗಳವಾರ ಅವರ ಸಂಪುಟಕ್ಕೆ 31 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. 'ಮಹಾಘಟಬಂಧನ್' ಸರ್ಕಾರದ ಮಂತ್ರಿಗಳಲ್ಲಿ ವಿಜಯ್ ಕುಮಾರ್ ಚೌಧರಿ, ತೇಜ್ ಪ್ರತಾಪ್ ಯಾದವ್ ಮತ್ತು ಅಲೋಕ್ ಮೆಹ್ತಾ ಸೇರಿದ್ದಾರೆ.
ನೂತನ ಸಚಿವರ ಪ್ರಮಾಣ ವಚನ
ನೂತನ ಸಚಿವರ ಪ್ರಮಾಣ ವಚನ

ಪಾಟ್ನಾ: ಬದಲಾದ ರಾಜಕೀಯ ವಿದ್ಯಮಾನದಲ್ಲಿ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಮಂಗಳವಾರ ಅವರ ಸಂಪುಟಕ್ಕೆ 31 ಶಾಸಕರು ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. 'ಮಹಾಘಟಬಂಧನ್' ಸರ್ಕಾರದ ಮಂತ್ರಿಗಳಲ್ಲಿ ವಿಜಯ್ ಕುಮಾರ್ ಚೌಧರಿ, ತೇಜ್ ಪ್ರತಾಪ್ ಯಾದವ್ ಮತ್ತು ಅಲೋಕ್ ಮೆಹ್ತಾ ಸೇರಿದ್ದಾರೆ.

ಇಂದು ಮುಂಜಾನೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಟ್ನಾದ ರಾಜಭವನಕ್ಕೆ ಆಗಮಿಸಿದರು. ಸಂಪುಟ ವಿಸ್ತರಣೆಗೂ ಮುನ್ನ ಜೆಡಿಯು ಶಾಸಕಿ ಲೇಶಿ ಸಿಂಗ್ ಅವರು ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವುದಾಗಿ ಹೇಳಿದ್ದರು.

ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಯಾದವ್ (ಇಬ್ಬರೂ ಜೆಡಿಯು), ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ (ಇಬ್ಬರೂ ಆರ್‌ಜೆಡಿ) ಮತ್ತು ಅಫಾಕ್ ಆಲಂ (ಕಾಂಗ್ರೆಸ್) ಬಿಹಾರ ಸಂಪುಟ ವಿಸ್ತರಣೆಯ ಮೊದಲ ತಂಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೇಶಿ ಸಿಂಗ್ (ಎಲ್ಲರೂ ಜೆಡಿಯು), ಸುರೇಂದ್ರ ಪ್ರಸಾದ್ ಯಾದವ್ ಮತ್ತು ರಮಾನಂದ್ ಯಾದವ್ (ಇಬ್ಬರೂ ಆರ್‌ಜೆಡಿ) ವಿಸ್ತರಣೆಯ ಎರಡನೇ ತಂಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಸಂಜಯ್ ಝಾ, ಮದನ್ ಸಾಹ್ನಿ (ಇಬ್ಬರೂ ಜೆಡಿಯು), ಕುಮಾರ್ ಸರ್ವಜೀತ್, ಲಲಿತ್ ಯಾದವ್ (ಇಬ್ಬರೂ ಆರ್‌ಜೆಡಿ) ಮತ್ತು ಸಂತೋಷ್ ಕುಮಾರ್ ಸುಮನ್ (ಎಚ್‌ಎಎಂ) ಬಿಹಾರ ಸಂಪುಟ ವಿಸ್ತರಣೆಯ ಮೂರನೇ ತಂಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶೀಲಾ ಕುಮಾರಿ, ಸುನಿಲ್ ಕುಮಾರ್ (ಇಬ್ಬರೂ ಜೆಡಿಯು), ಸಮೀರ್ ಕುಮಾರ್ ಮಹಾಸೇತ್, ಚಂದ್ರಶೇಖರ್ (ಇಬ್ಬರೂ ಆರ್‌ಜೆಡಿ) ಮತ್ತು ಸುಮಿತ್ ಕುಮಾರ್ ಸಿಂಗ್ (ಸ್ವತಂತ್ರ), ಮೊಹಮ್ಮದ್ ಜಮಾ ಖಾನ್, ಜಯಂತ್ ರಾಜ್ (ಇಬ್ಬರೂ ಜೆಡಿಯು), ಜಿತೇಂದ್ರ ಕುಮಾರ್ ರೈ, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್ (ಎಲ್ಲರೂ ಆರ್‌ಜೆಡಿ) ಬಿಹಾರ ಸಂಪುಟ ವಿಸ್ತರಣೆಯ ಐದನೇ ತಂಡವಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಹಾರ ಕ್ಯಾಬಿನೆಟ್ ಸದ್ಯ ಮುಖ್ಯಮಂತ್ರಿ ಸೇರಿದಂತೆ 36 ಮಂದಿಯ ಮಂತ್ರಿಮಂಡಲವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಗಾಗಿ ಕೆಲವು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗುವುದು ಎಂದು ಮೂಲಗಳು ತಿಳಿಸಿವೆ.

ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಮುಖ್ಯಮಂತ್ರಿ ಮತ್ತು ಅವರ ಪಾಲುದಾರ ಪಕ್ಷ ಆರ್ ಜೆಡಿಯ ತೇಜಸ್ವಿ ಯಾದವ್  ಉಪ ಮುಖ್ಯಮಂತ್ರಿಯಾಗಿ ಮೊನ್ನೆ ಆಗಸ್ಟ್ 10 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. 

ಬಿಹಾರದ ಮಹಾಮೈತ್ರಿಕೂಟವು 163 ರ ಸದಸ್ಯ ಬಲವನ್ನು ಹೊಂದಿದೆ. ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ ನಂತರ ಅದರ ಪರಿಣಾಮಕಾರಿ ಸದಸ್ಯರ ಬಲಾಬಲ ಸಂಖ್ಯೆ 164 ಕ್ಕೆ ಏರಿತು. ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ಹೊಸ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com