ಡ್ರಗ್ ಟೆಸ್ಟ್ ಪರೀಕ್ಷೆಯಲ್ಲಿ ವಿಫಲ: ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ಅನ್ನು ಕರ್ತವ್ಯದಿಂದ ತೆಗೆದ ಡಿಜಿಸಿಎ!

ಡ್ರಗ್ ಪರೀಕ್ಷೆಯಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ವಿಫಲರಾದ ಕಾರಣ ಅವರನ್ನು ವಿಮಾನ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಡ್ರಗ್ ಪರೀಕ್ಷೆಯಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ವಿಫಲರಾದ ಕಾರಣ ಅವರನ್ನು ವಿಮಾನ ಕರ್ತವ್ಯದಿಂದ ತೆಗೆದುಹಾಕಲಾಗಿದೆ ಎಂದು ಡಿಜಿಸಿಎಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜನವರಿ 31ರಿಂದ ಜಾರಿಗೆ ಬಂದ ಡ್ರಗ್ ಪರೀಕ್ಷೆಯಲ್ಲಿ ವಿಫಲರಾದ ನಾಲ್ಕನೇ ಪೈಲಟ್ ಇವರಾಗಿದ್ದಾರೆ. ಸೈಕೋಆಕ್ಟಿವ್ ವಸ್ತುಗಳ ಸೇವನೆಗಾಗಿ ವಾಯುಯಾನ ಸಿಬ್ಬಂದಿಯನ್ನು ಪರೀಕ್ಷಿಸುವ ವಿಧಾನ ಇದಾಗಿದೆ. ರ್ಯಾಂಡಮ್ ಆಧಾರದ ಮೇಲೆ ವಿಮಾನ ಸಿಬ್ಬಂದಿ ಮತ್ತು ATC ಗಳಿಗೆ ಪರೀಕ್ಷೆಯನ್ನು ಮಾಡಲಾಗುತ್ತದೆ.

ಇಲ್ಲಿಯವರೆಗೆ, ನಾಲ್ಕು ಪೈಲಟ್‌ಗಳು ಮತ್ತು ಒಬ್ಬ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಸೈಕೋಆಕ್ಟಿವ್ ಪದಾರ್ಥಗಳ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. 

ಅಧಿಕಾರಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಪ್ರಮುಖ ವಿಮಾನಯಾನ ಸಂಸ್ಥೆಯ ಪೈಲಟ್ ಡ್ರಗ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಆಗಸ್ಟ್ 23ರಂದು ಸ್ವೀಕರಿಸಿದ ದೃಢೀಕರಣ ಪರೀಕ್ಷೆಯ ವರದಿಯಲ್ಲಿ ಅವರಿಗೆ ಪಾಸಿಟಿವ್ ಕಂಡುಬಂದಿದ್ದು, ವಿಮಾನದ ಕರ್ತವ್ಯದಿಂದ ಅವರನ್ನು ತೆಗೆದುಹಾಕಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಿವಿಲ್ ಏವಿಯೇಷನ್ ​​ರಿಕ್ವೈರ್‌ಮೆಂಟ್ (ಸಿಎಆರ್) ಪ್ರಕಾರ, ಮೊದಲ ಬಾರಿಗೆ ದೃಢೀಕರಣದ ಔಷಧ ಪರೀಕ್ಷೆಯ ಫಲಿತಾಂಶವು ಸಕಾರಾತ್ಮಕವಾಗಿದ್ದರೆ, ಸಂಬಂಧಪಟ್ಟ ಸಿಬ್ಬಂದಿಯನ್ನು ಡಿ-ಡಿಕ್ಷನ್ ಮತ್ತು ಪುನರ್ವಸತಿಗಾಗಿ ಸಂಬಂಧಿಸಿದ ಸಂಸ್ಥೆಯು ಡಿ-ಅಡಿಕ್ಷನ್ ಸೆಂಟರ್‌ಗೆ ಕಳುಹಿಸಲಾಗುತ್ತದೆ.

ಅದೇ ಸಿಬ್ಬಂದಿಗೆ ಎರಡನೇ ಬಾರಿಗೂ ಪಾಸಿಟಿವ್ ಬಂದರೆ ಮೂರು ವರ್ಷಗಳ ಅವಧಿಗೆ ಅವನ ಅಥವಾ ಅವಳ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ಇನ್ನು ಮೂರನೇ ಬಾರಿಗೆ ಉಲ್ಲಂಘಿಸಿದ್ದು ಪತ್ತೆಯಾದರೆ ಆ ಸಿಬ್ಬಂದಿಯ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com