ವಿಮಾನ ಹೊರಡುವುದಕ್ಕೂ ಮುನ್ನ ಕಸ್ಟಮ್ಸ್ ಇಲಾಖೆಯೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾಹಿತಿ ಹಂಚಿಕೊಳ್ಳುವಂತೆ ಏರ್ ಲೈನ್ಸ್ ಗಳಿಗೆ ಆದೇಶ

ವಿಮಾನಗಳಲ್ಲಿ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ದೂರವಾಣಿ, ಪಾವತಿ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ಸುಂಕ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಎಲ್ಲಾ ವಿಮಾನ ಸಂಸ್ಥೆಗಳಿಗೂ ಸರ್ಕಾರ ಆದೇಶ ನೀಡಿದೆ. 
ಸ್ಪೈಸ್ ಜೆಟ್
ಸ್ಪೈಸ್ ಜೆಟ್

ನವದೆಹಲಿ: ವಿಮಾನಗಳಲ್ಲಿ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ದೂರವಾಣಿ, ಪಾವತಿ ಮಾಹಿತಿ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ಸುಂಕ ಇಲಾಖೆಯೊಂದಿಗೆ ಹಂಚಿಕೊಳ್ಳುವಂತೆ ಎಲ್ಲಾ ವಿಮಾನ ಸಂಸ್ಥೆಗಳಿಗೂ ಸರ್ಕಾರ ಆದೇಶ ನೀಡಿದೆ. 

ವಿಮಾನ ಟೇಕ್ ಆಫ್ ಆಗುವುದಕ್ಕೂ 24 ಗಂಟೆಗಳ ಮುನ್ನ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರ ಮಾಹಿತಿಯನ್ನೂ ಸರ್ಕಾರದೊಂದಿಗೆ ವಿಮಾನಯಾನ ಸಂಸ್ಥೆಗಳು ಹಂಚಿಕೊಳ್ಳಬೇಕಾಗುತ್ತದೆ. 

ಅಪರಾಧಿಗಳು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಗಟ್ಟುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆ.08 ರಂದು ಹಣಕಾಸು ಸಚಿವಾಲಯದ ವ್ಯಾಪ್ತಿ ಸಿಬಿಐಸಿ ಪ್ರಯಾಣಿಕರ ಹೆಸರು ದಾಖಲೆ ಮಾಹಿತಿ ನಿಯಮಗಳು- 2022ಕ್ಕೆ ಅಧಿಸೂಚನೆ ಪ್ರಕಟಿಸಿತ್ತು. ಅಪರಾಧಿಗಳು ದೇಶ ಬಿಡುವುದನ್ನು ತಡೆಯುವುದಕ್ಕೆ ಅಷ್ಟೇ ಅಲ್ಲದೇ, ಕಳ್ಳಸಾಗಣೆಯ ತಡೆಯ ಉದ್ದೇಶವನ್ನೂ ಈ ಅಧಿಸೂಚನೆ ಹೊಂದಿದೆ. 

ಪ್ರತಿಯೊಂದು ವಿಮಾನ ನಿರ್ವಾಹಕ ಸಂಸ್ಥೆಗಳಿಗೂ ಈ ಆದೇಶ ಅನ್ವಯವಾಗಲಿದ್ದು, ಈ ನಿಯಮ ಜಾರಿಗೆ ತರಲು ಪ್ರತಿ ವಿಮಾನ ಸಂಸ್ಥೆಯೂ ಕಸ್ಟಮ್ಸ್ ಜೊತೆಗೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com