ಗುಲಾಂ ನಬಿ ಆಜಾದ್ ನಿರ್ಗಮನ; 'ಕಾಂಗ್ರೆಸ್' ಭವಿಷ್ಯದ ಬಗ್ಗೆ ನಾಯಕರುಗಳಿಗೆ ಅನುಮಾನ; ಮತ್ತಷ್ಟು 'ಕೈ' ವಿಕೆಟ್ ಪತನ?

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದರಿಂದ ಪಕ್ಷದೊಳಗೆ ಆಳವಾಗಿ ಬೇರೂರಿರುವ ಅಸ್ವಸ್ಥತೆ ಯಿಂದಾಗಿ ಹಾಗೂ ಪರಿಹರಿಸಲಾಗದ ಕಾರಣದಿಂದ  ಮತ್ತಷ್ಟು ನಾಯಕರಿಗೆ ಪಕ್ಷ ತೊರೆಯಲು ಪ್ರಚೋದಿಸಬಹುದು.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ನವದೆಹಲಿ: ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದರಿಂದ ಪಕ್ಷದೊಳಗೆ ಆಳವಾಗಿ ಬೇರೂರಿರುವ ಅಸ್ವಸ್ಥತೆ ಯಿಂದಾಗಿ ಹಾಗೂ ಪರಿಹರಿಸಲಾಗದ ಕಾರಣದಿಂದ ಮತ್ತಷ್ಟು ನಾಯಕರಿಗೆ ಪಕ್ಷ ತೊರೆಯಲು ಪ್ರಚೋದಿಸಬಹುದು ಎಂದು ಮಾಜಿ ಕಾಂಗ್ರೆಸ್ ನಾಯಕ ಮತ್ತು ಕಾನೂನು ಸಚಿವ ಅಶ್ವಿನಿ ಕುಮಾರ್ ಹೇಳಿದ್ದಾರೆ.

ಶೀಘ್ರದಲ್ಲೇ ಪಕ್ಷದಿಂದ ಹೊಸ ಸಂಯೋಜನೆಗಳು ಹೊರಹೊಮ್ಮುತ್ತವೆ. ಭಾರತೀಯ ರಾಷ್ಟ್ರ ರಾಜಕಾರಣದಲ್ಲಿ ಉದಾರವಾದಿ ಜಾಗವನ್ನು ಆಕ್ರಮಿಸುತ್ತವೆ ಎಂದು ಅಶ್ವಿನ್ ಕುಮಾರ್ ಹೇಳಿದರು. ಭಿನ್ನಮತೀಯರೆಂದು ಕಳಂಕ ಹೊರಿಸುವ ಬದಲು ಒಳಗೊಳಗೇ ಪ್ರತಿಬಿಂಬಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಕಾಂಗ್ರೆಸ್ ನಾಯಕತ್ವಕ್ಕೆ ಕುಮಾರ್ ಕರೆ ನೀಡಿದ್ದಾರೆ.

"ಆಜಾದ್ ಅವರ ರಾಜೀನಾಮೆಯಿಂದ  ಸದ್ಯ ಪಕ್ಷವನ್ನು ಬಾಧಿಸುತ್ತಿರುವ ಆಳವಾಗಿ ಬೇರೂರಿರುವ ಅಸ್ವಸ್ಥತೆಯನ್ನು ಪರಿಹರಿಸಲಾಗುವುದಿಲ್ಲ ಎಂದು ಆಜಾದ್ ಜೊತೆಗಿನ ತಮ್ಮ ದಶಕಗಳ ಕಾಲದ ಒಡನಾಟದ ಬಗ್ಗೆ ಅಶ್ವಿನ್ ತಿಳಿಸಿದ್ದಾರೆ.  ಆದರೆ ನಿರೀಕ್ಷಿತ ಬೆಳವಣಿಗೆಯು ಹೆಚ್ಚಿನ ನಿರ್ಗಮನಗಳನ್ನು ಪ್ರಚೋದಿಸುತ್ತದೆ, ಇದು ರಾಜಕೀಯ ಅಪ್ರಸ್ತುತತೆಗೆ ತಳ್ಳುವ ಕಾಂಗ್ರೆಸ್ ಅನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯಿಂದ ಭಾರತದ "ಗ್ರ್ಯಾಂಡ್ ಓಲ್ಡ್ ಪಾರ್ಟಿ" ಯುಗ ಅಂತ್ಯವನ್ನು ಸೂಚಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು, ರಾಷ್ಟ್ರದ ರಾಜಕೀಯದಲ್ಲಿ ಜಾತ್ಯತೀತ ಮತ್ತು ಉದಾರವಾದಿ ಜಾಗವನ್ನು ಆಕ್ರಮಿಸಲು ಹೊಸ ಸಂಯೋಜನೆಗಳು ಹೊರಹೊಮ್ಮುತ್ತವೆ. ಸ್ವಾತಂತ್ರ್ಯ ಹೋರಾಟಗಾರ ಪಕ್ಷದ ಅವನತಿಯನ್ನು ನೋಡಲು ದುಃಖವಾಗುತ್ತದೆ ಎಂದು ಅಶ್ವಿನ್ ಕುಮಾರ್ ತಿಳಿಸಿದ್ದಾರೆ.

ಭಿನ್ನಮತೀಯರನ್ನು ದೂರುವ ಬದಲು ಕಾಂಗ್ರೆಸ್ ತನ್ನ ಆಂತರಿಕ ರಾಜಕೀಯದ ನ್ಯೂನತೆಗಳನ್ನು ಅವಲೋಕಿಸಬೇಕಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಅಶ್ವಿನ್ ಕುಮಾರ್ ಸಲಹೆ ನೀಡಿದ್ದಾರೆ. ಪಕ್ಷ ತನ್ನ ಅವನತಿಯಿಂದ ಪಾಠ ಕಲಿಯುತ್ತದೆಯೇ ಎಂಬುದು ಪ್ರಶ್ನೆ?" ಅವನು ಕೇಳಿದ್ದಾರೆ.

ಅನುಭವಿಗಳನ್ನು ಅವಮಾನಿಸಿ ಪಕ್ಷವನ್ನು ಬಲಪಡಿಸಬಹುದು ಎಂದು ಭಾವಿಸುವವರು, ದುರ್ಬಲ ತಳಹದಿಯ ಮೇಲೆ ಯಾವುದೇ ಸೂಪರ್‌ಸ್ಟ್ರಕ್ಚರ್ ಉಳಿಯುವುದಿಲ್ಲ ಎಂಬುದನ್ನು ಅರಿಯಬೇಕು. ಪ್ರಯತ್ನಗಳು ಮತ್ತು ಪರೀಕ್ಷೆಗಳು ಕಡಿಮೆಯಾದಾಗ ರಾಜಕೀಯ ಪಕ್ಷಗಳ ಅಡಿಪಾಯ ದುರ್ಬಲಗೊಳ್ಳುತ್ತದೆ ಎಂದು ಅವರು ತಿಳಿದಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಇತ್ತೀಚೆಗೆ ರಾಜೀನಾಮೆ ನೀಡಿದ ಮತ್ತೊಬ್ಬ ಮಾಜಿ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್, ಆಜಾದ್ ಅವರ ರಾಜೀನಾಮೆ ಪಕ್ಷಕ್ಕೆ ತಮ್ಮ ರಕ್ತ ಮತ್ತು ಬೆವರು ನೀಡುವ ಎಲ್ಲಾ ಸದುದ್ದೇಶವುಳ್ಳ ಕಾರ್ಯಕರ್ತರು ಮತ್ತು ನಾಯಕರಿಗೆ ದುಃಖದ ದಿನವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com