ಎನ್ ಡಿಟಿವಿಯಿಂದ ಹೊರನಡೆದ ಹಿರಿಯ ಪತ್ರಕರ್ತ ರವೀಶ್ ಕುಮಾರ್

ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸುದ್ದಿ ವಾಹಿನಿಯು ನಿನ್ನೆ ಬುಧವಾರ ಆಂತರಿಕ ಸಂವಹನದ ಮೂಲಕ ರವೀಶ್ ಕುಮಾರ್ ಅವರ ರಾಜೀನಾಮೆ ಘೋಷಿಸಿದೆ ಎಂದು ಹೇಳಲಾಗಿದೆ.
ರವೀಶ್ ಕುಮಾರ್
ರವೀಶ್ ಕುಮಾರ್
Updated on

ನವದೆಹಲಿ: ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಎನ್‌ಡಿಟಿವಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸುದ್ದಿ ವಾಹಿನಿಯು ನಿನ್ನೆ ಬುಧವಾರ ಆಂತರಿಕ ಸಂವಹನದ ಮೂಲಕ ರವೀಶ್ ಕುಮಾರ್ ಅವರ ರಾಜೀನಾಮೆ ಘೋಷಿಸಿದೆ ಎಂದು ಹೇಳಲಾಗಿದೆ.

ರಾಮನ್ ಮ್ಯಾಗಸೆಸೆ ಪ್ರಶಸ್ತಿ ವಿಜೇತ ಸುದ್ದಿ ನಿರೂಪಕರರಾಗಿರುವ ರವೀಶ್ ಕುಮಾರ್ ಜನಪ್ರಿಯ ಕಾರ್ಯಕ್ರಮಗಳಾದ 'ಪ್ರೈಮ್ ಟೈಮ್', 'ರವೀಶ್ ಕಿ ರಿಪೋರ್ಟ್', 'ಹಮ್ ಲೋಗ್' ಮತ್ತು 'ದೇಶ್ ಕಿ ಬಾತ್' ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿದೆ ಎಂದು ಎನ್‌ಡಿಟಿವಿ ತಿಳಿಸಿವೆ. 

"ಕೆಲವೇ ಪತ್ರಕರ್ತರು ರವೀಶ್ ಅವರಂತೆ ಜನರ ಮೇಲೆ ಪ್ರಭಾವ ಬೀರಿದ್ದಾರೆ" ಎಂದು ಆಂತರಿಕ ಸಂವಹನವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಎನ್‌ಡಿಟಿವಿಯ ಪ್ರವರ್ತಕ ಸಮೂಹ ಸಂಸ್ಥೆಯಾದ ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ (RRPR) ನಿರ್ದೇಶಕ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರ ರಾಜೀನಾಮೆಯನ್ನು ಹೊಸ ಎನ್‌ಡಿಟಿವಿ ಮಂಡಳಿ ಅನುಮೋದಿಸಿದ ಒಂದು ದಿನದ ನಂತರ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. 

ಮಂಡಳಿಯು ತಕ್ಷಣವೇ ಜಾರಿಗೆ ಬರುವಂತೆ ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಚೆಂಗಲ್ವರಾಯನ್ ಅವರನ್ನು RRPRH ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ನೇಮಿಸಿದೆ. ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್ ಹೋಲ್ಡಿಂಗ್ ಸೋಮವಾರ ತನ್ನ ಈಕ್ವಿಟಿ ಬಂಡವಾಳದ ಶೇಕಡಾ 99.5  ಷೇರುಗಳನ್ನು ಅದಾನಿ ಸಮೂಹದ ಒಡೆತನದ ವಿಶ್ವಪ್ರಧನ್ ಕಮರ್ಷಿಯಲ್ (VCPL) ಗೆ ವರ್ಗಾಯಿಸಿದೆ ಎಂದು ಹೇಳಿದ್ದು, ಎನ್‌ಡಿಟಿವಿಯ ಅಧಿಕೃತ ಸ್ವಾಧೀನವನ್ನು ಅದಾನಿ ಸಮೂಹವು ಪೂರ್ಣಗೊಳಿಸಿದೆ.

ಷೇರುಗಳ ವರ್ಗಾವಣೆಯು NDTV ಯಲ್ಲಿನ ಶೇಕಡಾ 29.18 ರಷ್ಟು ಪಾಲನ್ನು ಅದಾನಿ ಸಮೂಹಕ್ಕೆ ನೀಡುತ್ತದೆ. ವೈವಿಧ್ಯಮಯ ಸಂಘಟಿತ ಸಂಸ್ಥೆಯು ಮಾಧ್ಯಮ ಸಂಸ್ಥೆಯಲ್ಲಿ ಮತ್ತೊಂದು ಶೇಕಡಾ 26 ರಷ್ಟು ಷೇರುಗಳಿಗೆ ಮುಕ್ತ ಕೊಡುಗೆಯನ್ನು ಸಹ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com