ಮೆಚ್ಚುಗೆಯಿಂದ ವೈಯಕ್ತಿಕ ದಾಳಿಗೆ: ಮಾಧ್ಯಮಗಳು ತಮ್ಮ ವಿಷಯದಲ್ಲಿ ಬದಲಾಗಿದ್ದು ಹೇಗೆ? ರಾಹುಲ್ ಗಾಂಧಿ ಹೇಳಿದ್ದು ಹೀಗೆ...

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿಷಯದಲ್ಲಿ ಮಾಧ್ಯಮಗಳು ಬದಲಾಗಿದ್ದು ಹೇಗೆ ಎಂಬುದನ್ನು ಖುದ್ದಾಗಿ ವಿವರಿಸಿರುವ 2.15 ನಿಮಿಷದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಿಷಯದಲ್ಲಿ ಮಾಧ್ಯಮಗಳು ಬದಲಾಗಿದ್ದು ಹೇಗೆ ಎಂಬುದನ್ನು ಖುದ್ದಾಗಿ ವಿವರಿಸಿರುವ 2.15 ನಿಮಿಷದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ. 

ಮಾಧ್ಯಮಗಳು ರಾಹುಲ್ ಗಾಂಧಿ ಅವರ ಆರಂಭಿಕ ರಾಜಕೀಯ ವರ್ಷಗಳಲ್ಲಿ ಹೊಗಳುತ್ತಿದ್ದ ಮಾಧ್ಯಮಗಳು ಈಗ ವೈಯಕ್ತಿಕ ದಾಳಿಗೆ ಇಳಿದಿದ್ದರ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ, ತಮ್ಮ ವರ್ಚಸ್ಸನ್ನು ನಾಶ ಮಾಡುವುದಕ್ಕಾಗಿ ವರ್ಷಗಳ ಕಾಲ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

"ನಾನು 2004 ರಲ್ಲಿ ರಾಜಕಾರಣ ಪ್ರವೇಶಿಸಿದಾಗಿನಿಂದ 2008-09 ರ ವರೆಗೂ ಇಡೀ ಭಾರತೀಯ ಮಾಧ್ಯಮಗಳು ನನ್ನನ್ನು 24 ಗಂಟೆಗಳ ಕಾಲ ಹೊಗಳುತ್ತಿದ್ದವು. ನಂತರ ನಾನು ಎರಡು ವಿಷಯ ಪ್ರಸ್ತಾಪಿಸಿದ್ದೆ, ನಿಯಮ್ಗಿರಿ ಹಾಗೂ ಭಟ್ಟ ಪರ್ಸೌಲ್ (ಭೂ ಸ್ವಾಧೀನ ವಿಷಯ) ವಿಷಯಗಳನ್ನು ಪ್ರಸ್ತಾಪಿಸಿದ್ದೆ. ಈ ವಿಷಯಗಳನ್ನು ಪ್ರಸ್ತಾಪಿಸಿ ಬಡವರ, ಅವರ ಭೂಮಿಯ ಪರ ಮಾತನಾಡಿದ್ದೇ ತಡ, ಮಾಧ್ಯಮಗಳ ನಾಟಕ ಶುರು ಆಯಿತು ಎಂದು ರಾಹುಲ್ ಗಾಂಧಿ ತಮ್ಮ ವೀಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನಾವು ಆದಿವಾಸಿಗಳಿಗಾಗಿ ಪಿಇಎಸ್ಎ ಕಾಯ್ದೆ ತಂದೆವು, ಅರಣ್ಯ ಹಕ್ಕು ಕಾಯ್ದೆ ಜಾರಿಗೊಳಿಸಿದೆವು, ಭೂಸ್ವಾಧೀನ ಮಸೂದೆ ತಂದೆವು, ಇದಾದ ಬಳಿಕ ಮಾಧ್ಯಮಗಳು ನನ್ನ ವಿರುದ್ಧ 24 ಗಂಟೆಗಳ ಕಾಲ ಬರೆಯಲು ಶುರು ಮಾಡಿದವು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಸಂವಿಧಾನದ ಮೂಲಕ ಭಾರತದ ಆಸ್ತಿಗಳು ಮಹಾರಾಜರಿಂದ ಜನಸಾಮಾನ್ಯರಿಗೆ ವರ್ಗಾವಣೆಯಾಯಿತು, ಆದರೆ ಬಿಜೆಪಿ ಈಗ ಅದನ್ನು ತಲೆಕೆಳಗೆ ಮಾಡುತ್ತಿದೆ. ನಿಮ್ಮ ಆಸ್ತಿಗಳನ್ನು ಕಸಿದುಕೊಂಡು, ಮಹಾರಾಜರಿಗೆ ವಾಪಸ್ ನೀಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com