ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ನಟಿ ಸ್ವರಾ ಭಾಸ್ಕರ್

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಗುರುವಾರ ಪಾಲ್ಗೊಂಡು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಟಿ ಸ್ವರಾ ಭಾಸ್ಕರ್
ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ನಟಿ ಸ್ವರಾ ಭಾಸ್ಕರ್

ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಗುರುವಾರ ಪಾಲ್ಗೊಂಡು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಸ್ವರಾ ಭಾಸ್ಕರ್ ಅವರು ರಾಹುಲ್ ಗಾಂಧಿಯವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದೆ.

'ಇಂದು ಪ್ರಸಿದ್ಧ ನಟಿ ಸ್ವರಾ ಭಾಸ್ಕರ್ ಅವರು ಭಾರತ್ ಜೋಡೋ ಯಾತ್ರೆಯ ಭಾಗವಾದರು. ಸಮಾಜದ ಪ್ರತಿಯೊಂದು ವರ್ಗದ ಉಪಸ್ಥಿತಿಯು ಈ ಯಾತ್ರೆಯನ್ನು ಯಶಸ್ವಿಗೊಳಿಸಿದೆ' ಕಾಂಗ್ರೆಸ್ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

ಸ್ವರಾ ಭಾಸ್ಕರ್ ಅವರು ಸಮಕಾಲೀನ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಹೆಸರಾಗಿದ್ದು, ಕಾಂಗ್ರೆಸ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.

ಈ ಹಿಂದೆ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ, ಪೂಜಾ ಭಟ್, ರಿಯಾ ಸೇನ್, ಸುಶಾಂತ್ ಸಿಂಗ್, ಮೋನಾ ಅಂಬೇಗಾಂವ್ಕರ್, ರಶ್ಮಿ ದೇಸಾಯಿ, ಮತ್ತು ಆಕಾಂಕ್ಷಾ ಪುರಿ ಮುಂತಾದ ಚಿತ್ರರಂಗದ ಪ್ರಮುಖರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಹಾಲಿವುಡ್ ತಾರೆ ಜಾನ್ ಕುಸಾಕ್ ಅವರು ಸೆಪ್ಟೆಂಬರ್ ಅಂತ್ಯದಲ್ಲಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆದೆ ತಮ್ಮ ಬೆಂಬಲ ಸೂಚಿಸುವುದಾಗಿ ಹೇಳಿದ್ದರು.

ಒಂದು ದಿನದ ವಿರಾಮದ ನಂತರ ಗುರುವಾರ ಬೆಳಿಗ್ಗೆ ಉಜ್ಜಯಿನಿಯಿಂದ ಯಾತ್ರೆ ಪುನರಾರಂಭವಾಗಿದ್ದು, ಮಧ್ಯಪ್ರದೇಶದ ಕೊನೆಯ ಜಿಲ್ಲೆಯಾದ ಅಗರ್ ಮಾಲ್ವಾಕ್ಕೆ ತೆರಳಿತು.

ಮಧ್ಯಪ್ರದೇಶದಲ್ಲಿ 12 ದಿನಗಳ ನಂತರ ಡಿಸೆಂಬರ್ 4 ರಂದು ಯಾತ್ರೆ ರಾಜಸ್ಥಾನಕ್ಕೆ ಪ್ರವೇಶಿಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಗಾಂಧಿ ನೇತೃತ್ವದ ಯಾತ್ರೆಯು ನ. 23 ರಂದು ನೆರೆಯ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯನ್ನು ಪ್ರವೇಶಿಸಿತು.

150 ದಿನಗಳ ಭಾರತ್ ಜೋಡೊ ಯಾತ್ರೆಯ 83ನೇ ದಿನವಾದ ಇಂದು ಕೂಡ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜತೆ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಭಾರತ್ ಜೋಡೊ ಯಾತ್ರೆ 12 ರಾಜ್ಯಗಳ ಮೂಲಕ ಹಾದುಹೋಗಲಿದ್ದು, 3570 ಕಿ.ಮೀ. ದೂರ ಕ್ರಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com