ಚುನಾವಣೋತ್ತರ ಸಮೀಕ್ಷೆ: ಗುಜರಾತ್ ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ, ಹಿಮಾಚಲದಲ್ಲಿ ಜಿದ್ದಾಜಿದ್ದಿನ ಹೋರಾಟ

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಸೋಮವಾರ ಸಂಜೆ ಮುಕ್ತಾಯವಾಗಿದ್ದು, ಇದರೊಂದಿಗೆ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಎರಡು...
ಪ್ರಧಾನಿ ಮೋದಿ ರೋಡ್ ಶೋ
ಪ್ರಧಾನಿ ಮೋದಿ ರೋಡ್ ಶೋ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಚುನಾವಣೆಯ ಎರಡನೇ ಹಾಗೂ ಕೊನೆಯ ಹಂತದ ಮತದಾನ ಸೋಮವಾರ ಸಂಜೆ ಮುಕ್ತಾಯವಾಗಿದ್ದು, ಇದರೊಂದಿಗೆ ದೇಶಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ತೆರೆಬಿದ್ದಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.

ಗುಜರಾತ್ ನಲ್ಲಿ ಮತದಾರ ಈ ಬಾರಿಯೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಕೈಹಿಡಿಯುವ ಸಾಧ್ಯತೆ ಇದ್ದು, ಮತ್ತೊಮ್ಮೆ ಕಮಲ ಅರಳಲಿದೆ. ಹಿಮಾಚಲದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.

ಗುಜರಾತ್
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಪ್ರಕಾರ ಗುಜರಾತ್ ನಲ್ಲಿ ಬಿಜೆಪಿ 117-40 ಸ್ಥಾನ ಪಡೆದರೆ, ಕಾಂಗ್ರೆಸ್ 34-51 ಸ್ಥಾನ, | ಎಎಪಿ 6-13 ಹಾಗೂ ಇತರರು 1-2 ಸ್ಥಾನ ಪಡೆಯಲಿದ್ದಾರೆ.

ಪಿ-ಮಾರ್ಕ್ ಪ್ರಕಾರ, ಬಿಜೆಪಿ 128-148, ಕಾಂಗ್ರೆಸ್ 30-42, ಎಎಪಿ 2-10, ಇತರರು 0-3

ಟಿವಿ9 ಗುಜರಾತ್ ಸಮೀಕ್ಷೆ ಪ್ರಕಾರ, ಬಿಜೆಪಿ 125-130, ಕಾಂಗ್ರೆಸ್ 40-50, ಎಎಪಿ 3-5

2017ರಲ್ಲಿ ನಡೆದ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದ್ದಿತ್ತು. ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ 77 ಸ್ಥಾನಗಳನ್ನು ಪಡೆದುಕೊಂಡಿತ್ತು. ಪ್ರಸ್ತುತ 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿಯ ಬಲವು 111 ಆಗಿದೆ.

ಹಿಮಾಚಲ ಪ್ರದೇಶ ಎಕ್ಸಿಟ್ ಪೋಲ್ 
ಟೈಮ್ಸ್ ನೌ-ಇಟಿಜಿ ಪ್ರಕಾರ, ಬಿಜೆಪಿ 38, ಕಾಂಗ್ರೆಸ್ 28, ಎಎಪಿ 0, ಇತರೆ 1

ಜನ್ ಕಿ ಬಾತ್ ಪ್ರಕಾರ ಬಿಜೆಪಿ 32-40 ಸ್ಥಾನ, ಕಾಂಗ್ರೆಸ್ 27-34, ಎಎಪಿ 0, ಇತರರು 1-2

ಪಿ-ಮಾರ್ಕ್ -ಬಿಜೆಪಿ 34-39 ಸ್ಥಾನ, ಕಾಂಗ್ರೆಸ್ 28-33, ಎಎಪಿ 0-1, ಇತರರು 1-4

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಆಕ್ಸಿಸ್-ಮೈ ಇಂಡಿಯಾ ಸಮೀಕ್ಷೆ ಹೇಳಿದೆ, ಬಿಜೆಪಿ 24-34 ಸ್ಥಾನ ಪಡೆದರೆ, ಕಾಂಗ್ರೆಸ್ 30-40 ಸ್ಥಾನ, ಎಎಪಿ 0, ಇತರರು 4-8 ಸ್ಥಾನ ಗಳಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com