ಗುಜರಾತ್ ವಿಧಾನಸಭಾ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

ಅಹ್ಮದಾಬಾದ್ ನಗರದ ರಾನಿಪ್ ಪ್ರದೇಶದ ಶಾಲೆಯೊಂದರಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮತಹಕ್ಕು ಚಲಾಯಿಸಿದರು.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಅಹ್ಮದಾಬಾದ್: ಅಹ್ಮದಾಬಾದ್ ನಗರದ ರಾನಿಪ್ ಪ್ರದೇಶದ ಶಾಲೆಯೊಂದರಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮತಹಕ್ಕು ಚಲಾಯಿಸಿದರು.

ವಿಶೇಷವೆಂದರೆ ಪ್ರಧಾನಿ ಅವರು ಸರತಿ ಸಾಲಿನಲ್ಲಿ ನಿಂತು ಅವರು ಮತ ಚಲಾಯಿಸಿದರು. ಪ್ರಧಾನಿ ಮೋದಿ ಅವರು ಮತದಾನ ಕೇಂದ್ರವನ್ನು ತಲುಪಿದಾಗ ಸಾರ್ವಜನಿಕರಿಗೆ ವಿಕ್ಟರಿ ಚಿಹ್ನೆಯನ್ನು ಮಾಡಿದರು.

ನಂತರ ಕಾರಿನಿಂದ ಇಳಿದ ಮೋದಿಯವರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತಹಕ್ಕು ಚಲಾಯಿಸಿದರು.

ಮತ ಹಕ್ಕು ಚಲಾಯಿಸುವುದಕ್ಕೂ ಮುನ್ನ ಮೋದಿಯವರು ರಾಜ್ಯ ರಾಜಧಾನಿ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ, ತಾಯಿಯ ಆಶೀರ್ವಾದ ಪಡೆದುಕೊಂಡರು.

ಮತಹಕ್ಕು ಚಲಾಯಿಸಿದ ಸಿಎಂ ಭೂಪೇಂದ್ರ ಪಟೇಲ್, ಅಮಿತ್ ಶಾ
ಈ ನಡುವೆ ಗುಜರಾತ್ ರಾಜ್ಯ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೂ ಕೂಡ ತಮ್ಮ ಮತಹಕ್ಕು ಚಲಾಯಿಸಿದ್ದಾರೆ.

ಅಹಮದಾಬಾದ್‌ನ ಬೂತ್ 95, ಶಿಲಾಜ್ ಅನುಪಮ್ ಶಾಲೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮತದಾನ ಮಾಡಿದ್ದಾರೆ.

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ತಮ್ಮ ಪುತ್ರ ಹಾಗೂ ಕುಟುಂಬ ಸದಸ್ಯರೊಂದಿಗೆ ಅಹಮದಾಬಾದ್‌ನ ನಾರಣಪುರದಲ್ಲಿರುವ ಎಎಂಸಿ ಉಪ ವಲಯ ಕಚೇರಿಯಲ್ಲಿ ಮತ ಚಲಾಯಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮೋದಿ ಮನವಿ
2ನೇ ಹಂತದ ಮತದಾನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಗುಜರಾತ್ ಚುನಾವಣೆಯ 2 ನೇ ಹಂತದಲ್ಲಿ ಮತ ಚಲಾಯಿಸುತ್ತಿರುವ ಎಲ್ಲರಿಗೂ, ವಿಶೇಷವಾಗಿ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದೇನೆ. ನಾನು ಕೂಡ ಸುಮಾರು 9 ಗಂಟೆಗೆ ಅಹಮದಾಬಾದ್‌ನಲ್ಲಿ ನನ್ನ ಮತ ಹಕ್ಕನ್ನು ಚಲಾಯಿಸುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com