ತವಾಂಗ್ ಸಂಘರ್ಷ: ಭಾರತಕ್ಕಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚು, ಭಾರತೀಯ ಸೈನಿಕರಿಂದ ಚೀನಾಗೆ ಮರ್ಮಾಘಾತ!

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ನಡೆದ ಮುಖಾಮುಖಿ ಸಂಘರ್ಷದಲ್ಲಿ ಭಾರತೀಯ ಸೈನಿಕರಿಗಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚಿದೆ ಎಂದು ಸೇನಾ ಮೂಲಗಳು ಸೋಮವಾರ ತಿಳಿಸಿವೆ.
ತವಾಂಗ್ ಸಂಘರ್ಷ
ತವಾಂಗ್ ಸಂಘರ್ಷ

ನವದೆಹೆಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಶುಕ್ರವಾರ ನಡೆದ ಮುಖಾಮುಖಿ ಸಂಘರ್ಷದಲ್ಲಿ ಭಾರತೀಯ ಸೈನಿಕರಿಗಿಂತ ಚೀನಾ ಗಾಯಾಳು ಸೈನಿಕರ ಸಂಖ್ಯೆ ಹೆಚ್ಚಿದೆ ಎಂದು ಸೇನಾ ಮೂಲಗಳು ಸೋಮವಾರ ತಿಳಿಸಿವೆ.

ಸಂಘರ್ಷ ಪ್ರದೇಶದಲ್ಲಿ ನಿಯೋಜಿಸಲಾದ ಭಾರತೀಯ ಸೈನಿಕರು ಚೀನಾದ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಘರ್ಷಣೆಯಲ್ಲಿ ಗಾಯಗೊಂಡಿರುವ ಚೀನಾ ಸೈನಿಕರ ಸಂಖ್ಯೆ ಭಾರತೀಯ ಸೈನಿಕರಿಗಿಂತ ಹೆಚ್ಚಾಗಿದೆ. ಸೇನಾ ಮೂಲಗಳ ಪ್ರಕಾರ ಚೀನೀಯರು ಸುಮಾರು 300 ಸೈನಿಕರೊಂದಿಗೆ ಭಾರತೀಯ ಭೂಮಿ ಒತ್ತುವರಿ ಮಾಡಿಕೊಳ್ಳಲು ಭಾರಿ ತಯಾರಿ ನಡೆಸಿದ್ದರು. ಆದರೆ ಭಾರತದ ಸೈನಿಕರು ಇದನ್ನು ತಡೆದಿದ್ದು, ಈ ವೇಳೆ ನಡೆದ ಘರ್ಷಣೆಯಲ್ಲಿ ಪರಸ್ಪರ ಮಾರಾಮಾರಿಯಾಗಿದೆ. 

ಚೀನಾ ಸೈನಿಕರ ಪ್ರಚೋದನೆಗೆ ಭಾರತೀಯ ಸೈನಿಕರು ತಕ್ಕ ಪ್ರತಿಕ್ರಿಯೆ ನೀಡಿದ್ದು, ಚೀನಾ ಸೇನೆ ತಯಾರಿಗೆ ಪ್ರತಿಯಾಗಿ ಭಾರತೀಯ ಸೇನೆ ಸಹ ಉತ್ತಮವಾಗಿ ಸಿದ್ಧರಾಗಿದ್ದರು. ಆದರೆ ಈ ಬಗ್ಗೆ ನಿರೀಕ್ಷೆಯೇ ಇಲ್ಲದೇ ಚೀನಾ ಸೈನಿಕರು ದಾಳಿ ಮಾಡಿ ಮರ್ಮಾಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. 

ಚೀನೀಯರು ಸುಮಾರು 300 ಸೈನಿಕರೊಂದಿಗೆ ಭಾರತೀಯ ಪೋಸ್ಚ್ ಗಳನ್ನು ವಶಕ್ಕೆ ಪಡೆಯಲು ಭಾರಿ ತಯಾರಿ ನಡೆಸಿದ್ದರು. ಆದರೆ ಭಾರತದ ಸೈನಿಕರು ಸಹ ಉತ್ತಮವಾಗಿ ಸಿದ್ಧರಾಗಿರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಲಾಗಿದೆ.

ಭಾರತದ ಗಾಯಾಳು ಸೈನಿಕರಿಗೆ ಅಸ್ಸಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ
ಇನ್ನು ತವಾಂಗ್ ಘರ್ಷಣೆಯಲ್ಲಿ ಗಾಯಗೊಂಡ ಭಾರತೀಯ ಸೈನಿಕರಿಗೆ ಅಸ್ಸಾಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com