ಬಿಲ್ಕಿಸ್ ಬಾನೊ ಕೇಸ್: ಆರೋಪಿಗಳ ಬಿಡುಗಡೆ ವಿರುದ್ಧದ ಅರ್ಜಿ, ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ

2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಆರೋಪಿಗಳ ಬಿಡುಗಡೆ ವಿರುದ್ಧ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೆಲಾ ಎಂ.ತ್ರಿವೇದಿ ಮಂಗಳವಾರ ಹಿಂದೆ ಸರಿದಿದ್ದಾರೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: 2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಕುಟುಂಬ ಸದಸ್ಯರನ್ನು ಹತ್ಯೆ ಮಾಡಿದ್ದ 11 ಆರೋಪಿಗಳ ಬಿಡುಗಡೆ ವಿರುದ್ಧ ಬಿಲ್ಕಿಸ್ ಬಾನೊ ಸಲ್ಲಿಸಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ಮಂಗಳವಾರ ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಅಜಯ್ ರಾಸ್ಟೊಗಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯುತ್ತಿದೆ. ಎಲ್ಲಾ ಆರೋಪಿಗಳು ಬಿಡುಗಡೆಯಾಗಿರುವುದು ಆಘಾತ ಮೂಡಿಸಿದೆ ಎಂದು ಬಾನೊ ಅರ್ಜಿಯಲ್ಲಿ ಹೇಳಿದ್ದಾರೆ.  

ಎಲ್ಲಾ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿರುವುದು ಅರ್ಜಿದಾರರಿಗೆ ಮಾತ್ರವಲ್ಲ, ಆಕೆಯ ವಯಸ್ಸಿಗೆ ಬಂದಿರುವ ಮಗಳು, ಕುಟುಂಬ ಹಾಗೂ ಸಮಾಜಕ್ಕೂ ಆಘಾತ ಮೂಡಿಸಿದೆ. ಪ್ರಕರಣದ ಆರೋಪಿಗಳಾದ 11 ಮಂದಿ ಕ್ರಿಮಿನಲ್ ಗಳನ್ನು ಸರ್ಕಾರ ಬಿಡುಗಡೆ ಮಾಡಿರುವುದರ ವಿರುದ್ಧ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಆಕ್ರೋಶ, ನಿರಾಸೆ, ಅಪನಂಬಿಕೆ, ಪ್ರತಿಭಟನೆ ವ್ಯಕ್ತವಾಗಿದೆ ಎಂದು ವಕೀಲರಾದ ಶೋಭಾ ಗುಪ್ತಾ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಬಾನು ಉಲ್ಲೇಖಿಸಿದ್ದಾರೆ. 

ಐದು ತಿಂಗಳ ಗರ್ಭಿಣಿ ಎಂಬುದನ್ನು ಪರಿಗಣಿಸದೆ ತನ್ನ ಮೇಲೆ ಮೃಗೀಯ ರೀತಿಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ 11 ಮಂದಿ ಆರೋಪಿಗಳು ಬೇಗನೆ ಬಿಡುಗಡೆ ಆಗಿರುವುದು ತೀವ್ರ ನೋವು, ಹತಾಶೆ ಮೂಡಿಸಿದೆ ಎಂದು ಬಿಲ್ಕಿಸ್ ಬಾನೊ ಹೇಳಿಕೊಂಡಿದ್ದರು. ಈ ಪ್ರಕರಣ ಕುರಿತು ಮೇ 13 ರಂದು ಅಪೆಕ್ಸ್ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬಾನು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com