ತಪ್ಪಿನ ವಿರುದ್ಧ ಮತ್ತೆ ಹೋರಾಡುತ್ತೇನೆ: ಅತ್ಯಾಚಾರಿಗಳ ಬಿಡುಗಡೆ ಬಗ್ಗೆ ಬಿಲ್ಕಿಸ್ ಬಾನೊ
ತಪ್ಪಿನ ವಿರುದ್ಧ, ಸರಿಯಾದುದ್ದರ ಪರವಾಗಿ ಮತ್ತೆ ಹೋರಾಡುತ್ತೇನೆ ಎಂದು ಅತ್ಯಾಚಾರಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಿಲ್ಕಿಸ್ ಬಾನು ಹೇಳಿದ್ದಾರೆ.
Published: 01st December 2022 11:32 PM | Last Updated: 16th December 2022 03:15 PM | A+A A-

ಬಿಲ್ಕಿಸ್ ಬಾನೊ
ನವದೆಹಲಿ: ತಪ್ಪಿನ ವಿರುದ್ಧ, ಸರಿಯಾದುದ್ದರ ಪರವಾಗಿ ಮತ್ತೆ ಹೋರಾಡುತ್ತೇನೆ ಎಂದು ಅತ್ಯಾಚಾರಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಿಲ್ಕಿಸ್ ಬಾನೊ ಹೇಳಿದ್ದಾರೆ.
2002 ರಲ್ಲಿ ಗ್ಯಾಂಗ್ ರೇಪ್, ತನ್ನ ಕುಟುಂಬದ 7 ಮಂದಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಕೋರ್ಟ್ ಮೊರೆ ಹೋಗಿದ್ದಾರೆ.
ಈ ಘಟನೆ ನಡೆದಾಗ 21 ವರ್ಷಗಳ ಮಹಿಳೆ ಬಿಲ್ಕಿಸ್ ಬಾನು ಹಾಗೂ 5 ತಿಂಗಳ ಗರ್ಭಿಣಿಯಾಗಿದ್ದರು. 2002 ರಲ್ಲಿ ಗುಜರಾತ್ ಗಲಭೆಯ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಗ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ನಡೆದಿತ್ತು. ಜೊತೆಗೆ ಆಕೆಯ 3 ವರ್ಷದ ಮಗಳು ಸೇರಿದಂತೆ ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೊ ಮೇಲ್ಮನವಿ: ಅರ್ಜಿ ವಿಚಾರಣೆಗೆ ಸುಪ್ರೀಂ ಪರಿಗಣನೆ
ಗುಜರಾತ್ ಸರ್ಕಾರ ಈ ಪ್ರಕರಣದ ಅಪರಾಧಿಗಳನ್ನು ಆ.15 ರಂದು ಬಿಡುಗಡೆ ಮಾಡಿರುವುದನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು, ಸಮಾಜದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ನಿಂತು ನ್ಯಾಯಾಂಗದ ಕದ ತಟ್ಟುವುದು ನನಗೆ ಸುಲಭದ ವಿಷಯವಾಗಿರಲಿಲ್ಲ. ನನ್ನ ಕುಟುಂಬವನ್ನು ನಾಶ ಮಾಡಿದ ವ್ಯಕ್ತಿಗಳನ್ನು ಬಿಡುಗಡೆ ಮಾಡಿರುವ ಬೆಳವಣಿಗೆ ನನ್ನನ್ನು ದಂಗಾಗಿಸಿತ್ತು, ನಾನು ಅಘಾತಕ್ಕೊಳಗಾಗಿದ್ದೆ ಎಂದು ಬಿಲ್ಕಿಸ್ ಬಾನು ಹೇಳಿದ್ದಾರೆ.