• Tag results for ಅತ್ಯಾಚಾರಿಗಳು

ಒಂದಲ್ಲ, ಎರಡಲ್ಲ 3ನೇ ಬಾರಿಗೆ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಡೆತ್ ವಾರೆಂಟ್, ಮಾರ್ಚ್ 3ಕ್ಕೆ ಗಲ್ಲು ಫಿಕ್ಸ್!

ಎರಡೆರಡು ಬಾರಿ ಡೆತ್ ವಾರೆಂಟ್ ನಿಂದ ತಪ್ಪಿಸಿಕೊಂಡಿದ್ದ ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಇದೀಗ ಮತ್ತೆ ಡೆತ್ ವಾರೆಂಟ್ ಜಾರಿಯಾಗಿದ್ದು ಮಾರ್ಚ್ 3ರಂದು ಗಲ್ಲಿಗೆ ದಿನಾಂಕ ನಿಗದಿಯಾಗಿದೆ.

published on : 17th February 2020

'ಸಾವಿನ ಭಯ' ಜೈಲಿನಲ್ಲಿ ನಿರ್ಭಯಾ ಅತ್ಯಾಚಾರಿಗಳ ರಂಪಾಟ, ಕೊನೆ ಆಸೆಗೆ ನಕಾರ!

ನಿರ್ಭಯಾ ಅತ್ಯಾಚಾರಿ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದರೂ ನೇಣು ಕುಣಿಕೆಯಿಂದ ತಪ್ಪಿಸಿಕೊಂಡು ಬರುತ್ತಿದ್ದ ಅಪರಾಧಿಗಳಿಗೆ ಇದೀಗ ಸಾವಿನ ಭಯ ಶುರುವಾಗಿದ್ದು ಜೈಲಿನಲ್ಲಿ ರಂಪಾಟ ಶುರು ಮಾಡಿದ್ದಾರೆ. ಅಲ್ಲದೆ ತಮ್ಮ ಕೊನೆಯ ಆಸೆಯನ್ನು ನಿರಾಕರಿಸುತ್ತಿದ್ದಾರೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. 

published on : 23rd January 2020

ಫೆ.1, ಬೆಳಿಗ್ಗೆ 6 ಕ್ಕೆ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್: ದೆಹಲಿ ಕೋರ್ಟ್ ನಿಂದ ಹೊಸ ಡೆತ್ ವಾರೆಂಟ್

ದೇಶಾದ್ಯಂತ ತೀವ್ರ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿದ್ದ 2012ರಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರಿಗಳಿಗೆ ಫೆಬ್ರವರಿ 1 ರಂದು ಮುಂಜಾನೆ 6 ಗಂಟೆಗೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಈ ಸಂಬಂಧ ದೆಹಲಿಯ ನ್ಯಾಯಾಲಯವೊಂದು ಹೊಸದಾಗಿ ಡೆತ್ ವಾರೆಂಟ್ ಹೊರಡಿಸಿದೆ.

published on : 17th January 2020

7 ವರ್ಷಗಳ ನಂತರ ಅಪರಾಧಿಗಳಿಗೆ ಗಲ್ಲು ಫಿಕ್ಸ್, ನಿರ್ಭಯಾ ತಾಯಿ ಹೇಳಿದ್ದೇನು?

ನಿರ್ಭಯಾ ಅತ್ಯಾಚಾರ ಪ್ರಕರಣದ ಸಂಬಂಧ ದೆಹಲಿಯ ಪಟಿಯಾಲ ಕೋರ್ಟ್ ನಾಲ್ವರು ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲು ಡೆತ್ ವಾರೆಂಟ್ ಜಾರಿ ಮಾಡಿದ ಬೆನ್ನಲ್ಲೇ ನಿರ್ಭಯಾ ತಾಯಿ ಹೇಳಿಕೆ ಸಂತಸ ವ್ಯಕ್ತಪಡಿಸಿದ್ದಾರೆ.

published on : 7th January 2020

ದಿಶಾ ಮಸೂದೆ, ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ 

ಅತ್ಯಾಚಾರಿಗಳಿಗೆ 21 ದಿನಗಳೊಳಗೆ ಕಠಿಣ ಶಿಕ್ಷೆ ನೀಡುವ ದಿಶಾ ಮಸೂದೆಯನ್ನು ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿರುವುದಕ್ಕೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

published on : 15th December 2019

ನಾನೂ ಒಂದು ಹೆಣ್ಣು ಮಗುವಿನ ತಂದೆ - ನಟ ಉಪೇಂದ್ರ  ಟ್ವೀಟ್

ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ನಟ ಉಪೇಂದ್ರ ಮಾಡಿದ್ದ ಟ್ವೀಟ್ ಗೆ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದರು.

published on : 10th December 2019

ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ

ಇನ್ನು ಹೇಳಲು ಏನೂ ಇಲ್ಲ, ಅತ್ಯಾಚಾರಿಗಳು ಮರಣದಂಡನೆಗೆ ಅರ್ಹರು ಎಂದು ಅಸುನೀಗಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸಹೋದರ ಹೇಳಿದ್ದಾರೆ. 

published on : 7th December 2019

ಉನ್ನಾವೋ ಪ್ರಕರಣದ ಅತ್ಯಾಚಾರಿಗಳನ್ನು ತಿಂಗಳೊಳಗೆ ಗಲ್ಲಿಗೇರಿಸಿ: ಸ್ವಾತಿ ಮಾಲಿವಾಲ್

ಉನ್ನಾವೋ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಒಂದು ತಿಂಗಳಲ್ಲೆ ಮುಗಿಸಿ, ನಂತರ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕೆಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಅವರು ಆಗ್ರಹಪಡಿಸಿದ್ದಾರೆ.

published on : 7th December 2019

ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು: ರಾಷ್ಟ್ರಪತಿ

ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಹೇಳಿದ್ದಾರೆ.

published on : 6th December 2019

ತೆಲಂಗಾಣ ಎನ್ ಕೌಂಟರ್: ಕೇಜ್ರಿವಾಲ್, ಕಾರ್ತಿ ಚಿದಂಬರಂ ಸೇರಿ ಹಲವರ ಅಪಸ್ವರ

ರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿದ್ದ ಪಶುವೈದ್ಯೆ ದಿಶಾ (ಪ್ರಿಯಾಂಕಾ ರೆಡ್ಡಿ) ಮೇಲೆ ಹೇಯ ಕೃತ್ಯ ಎಸಗಿದವರನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಇಡೀ ದೇಶವೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದೆ, ಆದರೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾರ್ತಿ ಚಿದಂಬರಂ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ದೇಶದ ಜನ ನ್ಯಾಯಾಂಗ ವ್ಯವಸ್ಥೆಯ

published on : 6th December 2019

ಹೈದರಾಬಾದ್: ನರರಾಕ್ಷಸರನ್ನು ಬೇಟೆಯಾಡಿದ್ದು ಕರ್ನಾಟಕದ ಸಿಂಗಂ!

ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಗುಂಡಿ ತೋಡಿದ್ದು ನಮ್ಮ ಕರ್ನಾಟಕ ಮೂಲದ ಅಧಿಕಾರಿಯಾಗಿದ್ದಾರೆ. 

published on : 6th December 2019

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಪವನ್ ಕಲ್ಯಾಣ್  ಆಕ್ಷೇಪ:  ನಟನ ವಿರುದ್ದ ಆಕ್ರೋಶ

ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಈ ವಿಚಾರಕ್ಕೆ ನನ್ನ ಸಹಮತ ಇಲ್ಲ ಎಂದು ಪವನ್​​ ಕಲ್ಯಾಣ್​​ ಹೇಳಿದ್ಧಾರೆ.

published on : 5th December 2019