ಮಮತಾ ಬ್ಯಾನರ್ಜಿ ಭೇಟಿ ಮಾಡಿದ ಅಮಿತ್ ಶಾ, ಭೂ ಸಮಸ್ಯೆಗಳ ಕುರಿತು ಚರ್ಚೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಔಟ್‌ಪೋಸ್ಟ್‌ಗಳಿಗೆ ಭೂಮಿ ಮತ್ತು ರೈಲ್ವೆ ಯೋಜನೆಗಳು ಬಗ್ಗೆ ಮತ್ತು ಇತರ...
ಅಮಿತ್ ಶಾ - ಮಮತಾ
ಅಮಿತ್ ಶಾ - ಮಮತಾ

ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದು, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಔಟ್‌ಪೋಸ್ಟ್‌ಗಳಿಗೆ ಭೂಮಿ ಮತ್ತು ರೈಲ್ವೆ ಯೋಜನೆಗಳು ಬಗ್ಗೆ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ಅಮಿತ್ ಶಾ ಅವರು 25ನೇ ಪೂರ್ವ ವಲಯ ಕೌನ್ಸಿಲ್ ಸಭೆಗೆ ಆಗಮಿಸಿದ್ದ ವೇಳೆ ಮಮತಾ ಬ್ಯಾನರ್ಜಿ ಅವರ ಜೊತೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.

ಪಶ್ಚಿಮ ಬಂಗಾಳ ಸಚಿವಾಲಯ ನಬನ್ನಾದಲ್ಲಿ ಅಮಿತ್ ಶಾ ಅವರು ಕರೆದಿದ್ದ ಪೂರ್ವ ವಲಯ ಕೌನ್ಸಿಲ್ ಸಭೆಯಲ್ಲಿ, ರಾಜ್ಯ ಸರ್ಕಾರದ ಕಾರ್ಯದರ್ಶಿ, ಪಶ್ಚಿಮ ಬಂಗಾಳ ಸಿಎಂ, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಒಡಿಶಾದ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬೇಲಿ ಹಾಕುವುದು, ಗಡಿಯಾಚೆಗಿನ ಕಳ್ಳಸಾಗಣೆ ಮತ್ತು ಸರಕು ಸಾಗಣೆ ಕಾರಿಡಾರ್ ಅನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳ ಬಳಕೆ ಆರೋಪ ಮತ್ತು ಕೇಂದ್ರ ಸರ್ಕಾರದೊಂದಿಗೆ ಹಲವು ವಿಚಾರಗಳಲ್ಲಿ ಉತ್ತಮ ಸಮನ್ವ ಇಲ್ಲದಿರುವ ಸಮಯದಲ್ಲಿ ಅಮಿ ಶಾ ಮತ್ತು ಮಮತಾ ನಡುವಿನ ಮುಖಾ-ಮುಖಿ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಸಭೆಯ ನಂತರ ಅಮಿಶಾ ಶಾ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಬಿಜೆಪಿ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ''ನಾನು ಶಾ ಅವರನ್ನು ಸಿಎಂ ಭೇಟಿಯ ಬಗ್ಗೆ ಕೇಳಿದೆ. ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಗಡಿಯಲ್ಲಿ 72 ಬಿಎಸ್‌ಎಫ್ ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಲು ಅಗತ್ಯವಿರುವ ಜಮೀನು ಮತ್ತು ರಾಜ್ಯ ಪೊಲೀಸ್ ಪಡೆ ಮತ್ತು ಬಿಎಸ್‌ಎಫ್ ನಡುವಿನ ಉತ್ತಮ ಸಂವಹನದ ಕುರಿತು ಅವರೊಂದಿಗೆ ಚರ್ಚಿಸಲಾಗಿದೆ ಎಂದು ನನಗೆ ತಿಳಿಸಿದರು. ರಾಷ್ಟ್ರೀಯ ಭದ್ರತೆಗೆ ಭಾರತ-ಬಾಂಗ್ಲಾದೇಶದ ಗಡಿ ಏಕೆ ಬಹಳ ಮುಖ್ಯ ಎಂಬುದನ್ನು ವಿವರಿಸಿರುವುದಾಗಿ ಕೇಂದ್ರ ಸಚಿವರು ಹೇಳಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com