ನವದೆಹಲಿ: ಐಐಟಿಗಳಲ್ಲಿ ಸಂಶೋಧನೆ ವಿಭಾಗದ ಪದವಿ ವಿಭಾಗದಲ್ಲಿ ಹಾಗೂ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿಯ ಕಾನೂನನ್ನು ಅನುಸರಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರೀಯ ಶಿಕ್ಷಣ ಸಂಸ್ಥೆ (ಶಿಕ್ಷಕರ ಕೇಡರ್ ನಲ್ಲಿ ಮೀಸಲಾತಿ) ಕಾಯ್ದೆ, 2019 ರ ಕಾನೂನನ್ನು ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಎಸ್ಎನ್ ಪಾಂಡೇ ಎಂಬುವವರು ಈ ನಿಟ್ಟಿನಲ್ಲಿ ಮೀಸಲಾತಿ ಕಾನೂನು ಪಾಲಿಸಲು ಕೇಂದ್ರ ಸರ್ಕಾರ ಹಾಗೂ ಐಐಟಿಗಳಿಗೆ ನಿರ್ದೇಶನ ನೀಡಬೇಕು, ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ನ್ಯಾ. ಎಂಆರ್ ಷಾ, ಸಿಟಿ ರವಿಕುಮಾರ್ ಅವರಿದ್ದ ಪೀಠ ವಿಚಾರಾಣೆ ನಡೆಸುತ್ತಿತ್ತು ಹಾಗೂ ಕೇಂದ್ರ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ವರ್ಗದಲ್ಲಿ ಮೀಸಲಾತಿ) ಕಾಯಿದೆ, 2019 ಅಂತಹ ಮೀಸಲಾತಿಯನ್ನು ನಿಗದಿಪಡಿಸುತ್ತದೆ ಮತ್ತು ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕೋರ್ಟ್ ಗೆ ಮಾಹಿತಿ ನೀಡಲಾಗಿದೆ.
ಎಸ್ಎನ್ ಪಾಂಡೇ ಕಾರ್ಯನಿರ್ವಹಿಸದ ಅಧ್ಯಾಪಕರ ನೇಮಕಾತಿಯನ್ನು ರದ್ದುಗೊಳಿಸಿ ಪಾರದರ್ಶಕ ನೇಮಕಾತಿ ನೀತಿಯನ್ನು ರಚಿಸಬೇಕೆಂದು ಮನವಿ ಮಾಡಿದ್ದರು. ಐಐಟಿಗಳಲ್ಲಿ ಪಾದರ್ಶಕ ನೀತಿಯನ್ನು ಅನುಸರಿಸಲಾಗುತ್ತಿಲ್ಲ. ಇದರಿಂದ ಅರ್ಹತೆ ಇಲ್ಲದವರಿಗೂ ಅವಕಾಶ ಸಿಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
Advertisement