ಚೀನಾಗೆ ವಾಪಸ್ಸಾಗುವ ಬಗ್ಗೆ ದಲೈ ಲಾಮ ಪ್ರತಿಕ್ರಿಯೆ ಹೀಗಿದೆ...

ಟಿಬೆಟ್ ನ ಧಾರ್ಮಿಕ ಮುಖಂಡ, ದಲೈ ಲಾಮ ಚೀನಾಗೆ ವಾಪಸ್ಸಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
ದಲೈ ಲಾಮಾ
ದಲೈ ಲಾಮಾ

ನವದೆಹಲಿ: ಟಿಬೆಟ್ ನ ಧಾರ್ಮಿಕ ಮುಖಂಡ, ದಲೈ ಲಾಮ ಚೀನಾಗೆ ವಾಪಸ್ಸಾಗುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಭಾರತವೇ ತಮಗೆ ಸೂಕ್ತವಾದ ಜಾಗ, ತಮಗೆ ಭಾರತವೇ ಆದ್ಯತೆಯಾಗಿದ್ದು, ಇದೇ ನನ್ನ ಶಾಶ್ವತ ಆವಾಸಸ್ಥಾನ ಎಂದು ದಲೈ ಲಾಮ ತಿಳಿಸಿದ್ದಾರೆ. 

ತವಾಂಗ್ ಘರ್ಷಣೆಯ ಬಗ್ಗೆಯೂ ದಲೈ ಲಾಮ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯವಾಗಿ ಮಾತನಾಡಬೇಕೆಂದರೆ, ಪರಿಸ್ಥಿತಿಗಳು ಸುಧಾರಿಸುತ್ತಿವೆ. ಯುರೋಪ್ ಹಾಗೂ ಆಫ್ರಿಕಾ, ಏಷ್ಯಾದಲ್ಲೂ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ.  ಈಗ ಚೀನಾ ಸಹ ಬಾಗುತ್ತಿದೆ. ನನ್ನ ಆದ್ಯತೆ ಭಾರತವೇ ಆಗಿದೆ, ಭಾರತವೇ ನನ್ನ ಶಾಶ್ವತ ವಿಳಾಸ ಎಂದು ಹಿಮಾಚಲ ಪ್ರದೇಶದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಡಿ.09 ರಂದು ಪೀಪಲ್ಸ್ ಲಿಬರೇಷನ್ ಆರ್ಮಿ ಸಿಬ್ಬಂದಿಗಳು ಭಾರತೀಯ ಸೇನೆ ಘರ್ಷಣೆಗಿಳಿದ ಬೆನ್ನಲ್ಲೇ ದಲೈ ಲಾಮ ಈ ಹೇಳಿಕೆ ನೀಡಿದ್ದಾರೆ. 
 
ಚೀನಾ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು, ಟಿಕೆಟ್ ಚೀನಾ ವಶದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com