ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: 500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ‘ವಿಐಪಿ’ ಅತಿಥಿ ಎಂದು ಗುರುತಿಸಿದ ಎಸ್‌ಐಟಿ

ಬಿಜೆಪಿ ನಾಯಕನ ಪುತ್ರನ ರೆಸಾರ್ಟ್‌ನಲ್ಲಿ ಹತ್ಯೆಗೀಡಾಗಿದ್ದ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ್ ಪೊಲೀಸರ ವಿಶೇಷ ತನಿಖಾ ತಂಡವು, ಹತ್ಯೆಗೂ 'ವಿಐಪಿ ಅತಿಥಿ'ಗೂ ಸಂಬಂಧ ಇರುವುದನ್ನು ಕಂಡುಕೊಂಡಿದೆ.
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಬೆಂಕಿ ಹಚ್ಚಿದ ಸ್ಥಳೀಯರು
ಪುಲ್ಕಿತ್ ಆರ್ಯ ಒಡೆತನದ ರೆಸಾರ್ಟ್‌ಗೆ ಬೆಂಕಿ ಹಚ್ಚಿದ ಸ್ಥಳೀಯರು

ಡೆಹ್ರಾಡೂನ್: ಬಿಜೆಪಿ ನಾಯಕನ ಪುತ್ರನ ರೆಸಾರ್ಟ್‌ನಲ್ಲಿ ಹತ್ಯೆಗೀಡಾಗಿದ್ದ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ್ ಪೊಲೀಸರ ವಿಶೇಷ ತನಿಖಾ ತಂಡವು, ಹತ್ಯೆಗೂ 'ವಿಐಪಿ ಅತಿಥಿ'ಗೂ ಸಂಬಂಧ ಇರುವುದನ್ನು ಕಂಡುಕೊಂಡಿದೆ. ಅವರಿಗಾಗಿಯೇ 'ವಿಶೇಷ ಸೇವೆಗಳನ್ನು' ಒದಗಿಸುವಂತೆ ವಂತ್ರಾ ರೆಸಾರ್ಟ್‌ನ ರಿಸೆಪ್ಷನಿಸ್ಟ್ ಆಗಿದ್ದ ಅಂಕಿತಾ ಭಂಡಾರಿ ಅವರ ಮೇಲೆ ಒತ್ತಡ ಹೇರಿದ್ದರು ಎಂದಿದೆ.

19 ವರ್ಷದ ಅಂಕಿತಾಳ ಶವವನ್ನು ರಿಷಿಕೇಶದ ಚಿಲ್ಲಾ ಕಾಲುವೆಯಿಂದ ಸೆಪ್ಟೆಂಬರ್ 24 ರಂದು ವಶಪಡಿಸಿಕೊಳ್ಳಲಾಯಿತು. ಆಕೆಯ ಹಠಾತ್ ನಾಪತ್ತೆ ಮತ್ತು ಕೊಲೆ ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ನಡೆಸುತ್ತಿದ್ದ ರೆಸಾರ್ಟ್‌ನಲ್ಲಿ ಅವರು ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಂಕಿತಾ ನಾಪತ್ತೆಯಾಗಿದ್ದ ಆರು ದಿನಗಳ ಬಳಿಕ ಅಧಿಕಾರಿಗಳಿಗೆ ಆಕೆಯ ಶವ ಪತ್ತೆಯಾಗಿತ್ತು ಎಂದು ವರದಿಯಾಗಿದೆ. ಪುಲ್ಕಿತ್ ಆರ್ಯ ಸೇರಿದಂತೆ ಮೂವರು ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ.

ಪೊಲೀಸರು ವಿಐಪಿ ಯಾರೆಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಕೋಟ್‌ದ್ವಾರದ ನ್ಯಾಯಾಲಯದಲ್ಲಿ ಪೊಲೀಸರು ಸಲ್ಲಿಸಿದ 500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು 'ವಿಐಪಿ ಅತಿಥಿ'ಯೊಂದಿಗೆ ಹೇಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. 'ಅತಿಥಿ' ಉತ್ತರ ಪ್ರದೇಶಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿಯ ಚಾರ್ಜ್‌ಶೀಟ್‌ನಲ್ಲಿ ಅತಿಥಿಯ ಹೇಳಿಕೆಯನ್ನು ಮೂರು ಪುಟಗಳಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಇದು ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳನ್ನು ಬಹಿರಂಗಪಡಿಸಿದೆ. ತನಿಖೆ ವೇಳೆ ರೆಸಾರ್ಟ್‌ನಲ್ಲಿ ತಂಗಿದ್ದ ಸುಮಾರು 50 ಮಂದಿಯನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದೆ. ಅಂಕಿತಾ ಶವವಾಗಿ ಪತ್ತೆಯಾಗುವ ಒಂದು ವಾರದ ಹಿಂದೆ ರೆಸಾರ್ಟ್‌ನಲ್ಲಿ ಅತಿಥಿಯೊಬ್ಬರು ತನ್ನನ್ನು ತಬ್ಬಿಕೊಂಡಿದ್ದಾಗಿ ಅಂಕಿತಾ ತನ್ನ ಸ್ನೇಹಿತೆ ಪುಷ್ಪಾಗೆ ಹೇಳಿದ್ದರು.

ಮೂಲಗಳ ಪ್ರಕಾರ, ಪುಲ್ಕಿತ್ 'ವಿಶೇಷ ಸೇವೆಗಳಿಗಾಗಿ' ಕನಿಷ್ಠ 10,000 ರೂ. ಗಳ ಹೆಚ್ಚುವರಿ ಮೊತ್ತವನ್ನು ವಿಧಿಸಿದ್ದಾರೆ ಎಂದು ಅತಿಥಿ ಎಸ್ಐಟಿಗೆ ತಿಳಿಸಿದ್ದಾರೆ. ಪೊಲೀಸರು ಆರೋಪಪಟ್ಟಿಯಲ್ಲಿ 97 ಸಾಕ್ಷಿಗಳನ್ನು ಹೆಸರಿಸಿದ್ದು, ಇವರಲ್ಲಿ 35 ಮಂದಿ ರೆಸಾರ್ಟ್‌ನ ಉದ್ಯೋಗಿಗಳು ಮತ್ತು ಇಲ್ಲಿ ತಂಗಿದ್ದ ಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com