ಉಗ್ರರ ಸಹಚರರೊಂದಿಗೆ ಭದ್ರತಾ ಪಡೆ ಸಿಬ್ಬಂದಿ
ಉಗ್ರರ ಸಹಚರರೊಂದಿಗೆ ಭದ್ರತಾ ಪಡೆ ಸಿಬ್ಬಂದಿ

ಜಮ್ಮು-ಕಾಶ್ಮೀರ: ಭದ್ರತಾ ಪಡೆಗಳಿಂದ ಹಿಜ್ಬುಲ್ ಅಡಗುತಾಣ ಪತ್ತೆ, ಐವರು ಉಗ್ರ ಸಹಚರರ ಬಂಧನ

ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಅಡಗು ತಾಣವೊಂದನ್ನು ಗುರುವಾರ ಪತ್ತೆ ಹಚ್ಚಿರುವ ಭದ್ರತಾ ಪಡೆಗಳು, ಐವರು ಉಗ್ರ ಸಹಚರರನ್ನು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published on

ಕುಪ್ವಾರ: ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಅಡಗು ತಾಣವೊಂದನ್ನು ಗುರುವಾರ ಪತ್ತೆ ಹಚ್ಚಿರುವ ಭದ್ರತಾ ಪಡೆಗಳು, ಐವರು ಉಗ್ರ ಸಹಚರರನ್ನು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮತ್ತು ಸೇನೆಯ ಜಂಟಿ ತಂಡವೊಂದು ಕಾರ್ಯಾಚರಣೆ ನಡೆಸಿ, ಮೊದಲಿಗೆ ಮೂವರು ಉಗ್ರ ಸಹಚರರನ್ನು ಬಂಧಿಸಿತ್ತು. ನಂತರ ಅವರ ವಿಚಾರಣೆ ನಡೆಸಿದಾಗ  ಪಾಕ್ ಮೂಲದ ಉಗ್ರರನ್ನು ನಿರ್ವಹಿಸುತ್ತಿದ್ದ ಫಾರೂಖ್ ಅಹಮ್ಮದ್ ಫಿರ್ ಅವರ ಸೂಚನೆ ಮೇರೆಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರರಿಗೆ ಎರಡು ಅಡಗು ತಾಣಗಳನ್ನು ನಿರ್ಮಿಸಿರುವ ಬಗ್ಗೆ ಮಾಹಿತಿ ಪಡೆಯಲಾಯಿತು.

ತದನಂತರ, ಅಡಗುತಾಣದಿಂದ ಒಂದು ಎಕೆ ರೈಫಲ್, ಎರಡು ಮ್ಯಾಗಜೀನ್ ಗಳು, 119 ಎಕೆ ಶಸಾಸ್ತ್ರಗಳು, ನಾಲ್ಕು ಪಿಸ್ತೂಲ್ ಗುಂಡುಗಳು, ಆರು ಕೈ ಗ್ರೆನೇಡ್ ಗಳು, ಒಂದು ಐಇಡಿ, ಎರಡು ಸ್ಫೋಟಕಗಳು, ಎರಡು ವೈರ್ ಬಂಡಲ್ ಮತ್ತು ಸುಮಾರು 100 ಲೀಟರ್ ಸಾಮರ್ಥ್ಯದ ಒಂದು ನೀರಿನ ಟ್ಯಾಂಕರ್ ವೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಡಗುತಾಣ ನಿರ್ಮಾಣಕ್ಕೆ ಸಲಕರಣೆಗಳು ಹಾಗೂ ಶಸಾಸ್ತ್ರ, ಮದ್ದುಗುಂಡುಗಳನ್ನು ಖರೀದಿಸಲು ಜೂನ್ ತಿಂಗಳಲ್ಲಿ 6 ಲಕ್ಷ ರೂಪಾಯಿ ಪಡೆದಿರುವುದಾಗಿ ಬಂಧಿತರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಮೂವರ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದ ಮತ್ತಿಬ್ಬರು ಉಗ್ರ ಸಹಚರರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com