
ತ್ರಿಪುರಾ: ಭಾರತೀಯ ಜನತಾ ಪಕ್ಷದ ಶಾಸಕ ದಿಬಚಂದ್ರ ಹ್ರಾಂಗ್‌ಖಾವಲ್ ಅವರು ಬುಧವಾರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ವರ್ಷ ಕೇಸರಿ ಪಕ್ಷದ ತ್ಯಜಿಸಿದ ಆಡಳಿತಾರೂಢ ಮೈತ್ರಿಕೂಟದ ಏಳನೇ ಶಾಸಕರಾಗಿದ್ದಾರೆ.
ಧಲೈನಲ್ಲಿರುವ ಕರಮ್‌ಚೆರ್ರಾದ ಬುಡಕಟ್ಟು ಶಾಸಕರಾದ ಹ್ರಾಂಗ್‌ಖಾವಲ್ ಅವರು ತ್ರಿಪುರಾ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ವೈಯಕ್ತಿಕ ಕಾರಣಗಳನ್ನು ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೀಕರ್ ರತನ್ ಚಕ್ರವರ್ತಿ ಅವರು ಲಭ್ಯವಿಲ್ಲದ ಕಾರಣ ವಿಧಾನಸಭೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ದಿಬಚಂದ್ರ ಹ್ರಾಂಗ್‌ಖಾವಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹ್ರಾಂಗ್‌ಖಾವಲ್ ಅವರು 2018ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ್ದರು.
"ನಾನು ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆದರೆ ರಾಜಕೀಯ ವ್ಯಕ್ತಿಯಾಗಿರುವುದರಿಂದ ನಾನು ರಾಜಕೀಯದಲ್ಲಿಯೇ ಉಳಿಯುತ್ತೇನೆ" ಎಂದು ಅವರು ಹೇಳಿದ್ದಾರೆ.
Advertisement