ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವು; ಪೊಲೀಸರಿಂದ ತನಿಖೆ- ಎಂಇಎ

ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅದರಲ್ಲಿ ಮೂಗು ತೂರಿಸಲು ಬಯಸುವುದಿಲ್ಲ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.
ರಷ್ಯಾ ಸಂಸದ ಪಾವೆಲ್ ಆಂಟೋವ್, ಎಂಇಎ ವಕ್ತಾರ ಬಾಗ್ಚಿ
ರಷ್ಯಾ ಸಂಸದ ಪಾವೆಲ್ ಆಂಟೋವ್, ಎಂಇಎ ವಕ್ತಾರ ಬಾಗ್ಚಿ

ಭುವನೇಶ್ವರ: ಒಡಿಶಾದಲ್ಲಿ ಇಬ್ಬರು ರಷ್ಯಾ ಪ್ರಜೆಗಳ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಅದರಲ್ಲಿ ಮೂಗು ತೂರಿಸಲು ಬಯಸುವುದಿಲ್ಲ ಎಂದು  ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

ಒಡಿಶಾದ ರಾಯಗಡ ಜಿಲ್ಲೆಯ ಹೋಟೆಲ್‌ವೊಂದರಲ್ಲಿ ಜನಪ್ರತಿನಿಧಿ ಸೇರಿದಂತೆ ಇಬ್ಬರು ರಷ್ಯಾದ ನಾಗರಿಕರು ಶವವಾಗಿ ಪತ್ತೆಯಾಗಿದ್ದರು. ರಷ್ಯಾದ ಸಂಸದ ಮತ್ತು ಉದ್ಯಮಿ ಪಾವೆಲ್ ಆಂಟೋವ್ (65) ಡಿಸೆಂಬರ್ 24 ರಂದು ಹೋಟೆಲ್‌ನ ಮೂರನೇ ಮಹಡಿಯಿಂದ ಬಿದ್ದು  ಸಾವನ್ನಪ್ಪಿದ್ದರು. ಅವರ ಸಹ-ಪ್ರಯಾಣಿಕ ವ್ಲಾಡಿಮಿರ್ ಬಿಡೆನೋವ್  ಡಿಸೆಂಬರ್ 22 ರಂದು ಅವರ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. 

ಈ ಕುರಿತು ಪ್ರತಿಕ್ರಿಯಿಸಿದ ಬಾಗ್ಚಿ,  ಘಟನೆ ಬಗ್ಗೆ ನಮಗೆ ತಿಳಿದಿದೆ. ಒಡಿಶಾ ಪೊಲೀಸರು ನಮ್ಮ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದ್ದಾರೆ. "ಇದೊಂದು ದುರದೃಷ್ಟಕರ ಸಾವಿನ ಘಟನೆಯಾಗಿದ್ದು, ವಿವರಗಳು ತಿಳಿದುಬರಬೇಕಾಗಿದೆ. ಪೊಲೀಸರ ತನಿಖೆಯಲ್ಲಿ ಮೂಗು ತೂರಿಸುವುದಿಲ್ಲ ಎಂದರು.

 ದೆಹಲಿ ಮೂಲದ ಟ್ರಾವೆಲ್ ಗೈಡ್ ಜಿತೇಂದ್ರ ಸಿಂಗ್ ಅವರೊಂದಿಗೆ ಡಿಸೆಂಬರ್ 21 ರಂದು ಇವರಿಬ್ಬರೂ ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು. ಬಿದ್ದ ನಂತರ ಗಾಯಗೊಂಡು ರಷ್ಯಾದ ಸಂಸದರು ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಆದರೆ ಬಿಡೆನೋವ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com