ಕೇರಳ: ದುರಂತವಾದ ಅಣುಕು ಪ್ರದರ್ಶನ, ವಿಪತ್ತು ನಿರ್ವಹಣಾ ದಳ ಸ್ವಯಂ ಸೇವಕ ಸಾವು

ಸಂಭಾವ್ಯ ಅಪಾಯ ಎದುರಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಆಯೋಜಿಸಲಾಗಿದ್ದ ಅಣುಕು ಪ್ರದರ್ಶನ ದುರಂತವಾಗಿ ಮಾರ್ಪಟ್ಟಿದ್ದು, ಈ ಮಾಕ್ ಡ್ರಿಲ್ ನಲ್ಲಿ ಪಾಲ್ಗೊಂಡಿದ್ದ ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿದ್ದಾರೆ.
ಮುಳುಗಿ ಸಾವು
ಮುಳುಗಿ ಸಾವು

ಕೊಚ್ಚಿನ್: ಸಂಭಾವ್ಯ ಅಪಾಯ ಎದುರಿಸುವ ನಿಟ್ಟಿನಲ್ಲಿ ಕೇರಳದಲ್ಲಿ ಆಯೋಜಿಸಲಾಗಿದ್ದ ಅಣುಕು ಪ್ರದರ್ಶನ ದುರಂತವಾಗಿ ಮಾರ್ಪಟ್ಟಿದ್ದು, ಈ ಮಾಕ್ ಡ್ರಿಲ್ ನಲ್ಲಿ ಪಾಲ್ಗೊಂಡಿದ್ದ ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿದ್ದಾರೆ.

ಹೌದು.. ಕೇರಳದಲ್ಲಿ ಪ್ರವಾಹವನ್ನು ಎದುರಿಸಲು ವಿಪತ್ತು ನಿರ್ವಹಣಾ ಏಜೆನ್ಸಿಗಳು ಹಮ್ಮಿಕೊಂಡಿದ್ದ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ ದುರಂತದಲ್ಲಿ ಅಂತ್ಯವಾಗಿದ್ದು, ಈ ಅಣುಕು ಪ್ರದರ್ಶನದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. 

ಮಧ್ಯ ಕೇರಳದ ಪಥನಂತಿಟ್ಟ ಜಿಲ್ಲೆಯ ಕೀಳ್ವೈಪುರದ ಮಣಿಮಾಲಾ ನದಿಯಲ್ಲಿ ಆಯೋಜಿಸಲಾಗಿದ್ದ ಪ್ರವಾಹ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನದಲ್ಲಿ ಸ್ವಯಂಸೇವಕರೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.  34 ವರ್ಷದ ಬಿನು ಸೋಮನ್ ಅವರು ಮಣಿಮಾಲಾ ನದಿಯಲ್ಲಿ ಮುಳುಗಿ ಸಾವಮ್ಮಪ್ಪಿದ ವ್ಯರ್ಕಿಯಾಗಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ರಕ್ಷಿಸಿ ತಿರುವಲ್ಲಾದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರವಾಹ ಮತ್ತು ಭೂಕುಸಿತವನ್ನು ಎದುರಿಸಲು ವಿಪತ್ತು ನಿರ್ವಹಣಾ ತಂಡದ ಸನ್ನದ್ಧತೆಯನ್ನು ನಿರ್ಣಯಿಸುವ ಭಾಗವಾಗಿ ಗುರುವಾರ ಪಥನಂತಿಟ್ಟ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಣಕು ಪ್ರದರ್ಶನಗಳನ್ನು ಆಯೋಜಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com