ಅಸಂಸದೀಯ ಪದಗಳ ಪಟ್ಟಿಗೆ ಭಾರೀ ವಿರೋಧ: ಕೇವಲ ಪದಗಳ ಸಂಕಲನ ಎಂದ ಕೇಂದ್ರ

ಸೋಮವಾರ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ ಅಸಂಸದೀಯ ಪದಗಳೆಂದು ಪಟ್ಟಿ ಮಾಡಿ ಅವುಗಳನ್ನ ಸದನದಲ್ಲಿ ಬಳಸಬಾರದೆಂದು ಲೋಕಸಭೆ ಸಚಿವಾಲಯ ಹೊರಡಿಸಿರುವ ಹೊಸ ಕಿರುಹೊತ್ತಿಗೆಯಲ್ಲಿನ...
ಸಂಸತ್ತು
ಸಂಸತ್ತು
Updated on

ನವದೆಹಲಿ: ಸೋಮವಾರ ಆರಂಭವಾಗಲಿರುವ ಮುಂಗಾರು ಅಧಿವೇಶನಕ್ಕೂ ಮುನ್ನ ಅಸಂಸದೀಯ ಪದಗಳೆಂದು ಪಟ್ಟಿ ಮಾಡಿ ಅವುಗಳನ್ನ ಸದನದಲ್ಲಿ ಬಳಸಬಾರದೆಂದು ಲೋಕಸಭೆ ಸಚಿವಾಲಯ ಹೊರಡಿಸಿರುವ ಹೊಸ ಕಿರುಹೊತ್ತಿಗೆಯಲ್ಲಿನ ಪದಗಳಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಯಾವುದೇ ಪದಗಳನ್ನು ನಿಷೇಧಿಸಿಲ್ಲ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಗುರುವಾರ ಸ್ಪಷ್ಟಪಡಿಸಿದ್ದಾರೆ.

“ಭ್ರಷ್ಟ” ಮತ್ತು “ಬೇಜವಾಬ್ದಾರಿ”ಯಂತಹ ಮೂಲಭೂತ ಪದಗಳನ್ನು ಒಳಗೊಂಡಿರುವ ಸಂಸತ್ತಿಗೆ ಅನರ್ಹವೆಂದು ಪರಿಗಣಿಸಲಾದ ಪದಗಳ ನವೀಕರಿಸಿದ ಪಟ್ಟಿಗೆ ಭಾರಿ ಹಿನ್ನಡೆಯ ನಡುವೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸದನದಲ್ಲಿ ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ ಎಂದಿದ್ದಾರೆ.

"ಇದು ಸಲಹೆ ಅಥವಾ ಆದೇಶವಲ್ಲ", ಏಕೆಂದರೆ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಅಧ್ಯಕ್ಷರು ಈಗಾಗಲೇ ನಿಯಮಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಈ ಪಟ್ಟಿಯು ಹೊಸದಲ್ಲ, ಆದರೆ ಲೋಕಸಭೆ, ರಾಜ್ಯಸಭೆ ಅಥವಾ ರಾಜ್ಯ ಶಾಸಕಾಂಗಗಳಲ್ಲಿ ಈಗಾಗಲೇ ತೆಗೆದುಹಾಕಲಾದ ಪದಗಳ ಸಂಕಲನವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಯುಪಿಎ ಆಡಳಿತಾವಧಿಯಲ್ಲಿಯೂ ಈ ಪದಗಳನ್ನು ಅಸಂಸದೀಯ ಪದಗಳು ಎಂದು ಪರಿಗಣಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸಂಸತ್ತಿಗೆ ಅನರ್ಹವೆಂದು ಪರಿಗಣಿಸಲಾದ ಇತ್ತೀಚಿನ ಪದಗಳ ಪಟ್ಟಿಗೆ ವಿರೋಧ ಪಕ್ಷಗಳು ಭಾರೀ ಆಕ್ಷೇಪವೆತ್ತಿದ್ದವು. ವಿಪಕ್ಷ ಶಾಸಕರ ಪ್ರತಿಭಟನೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು “ಅಸಂಸದೀಯ” ಪದದ ವ್ಯಾಖ್ಯಾನವನ್ನು ನೀಡಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಧಾನಮಂತ್ರಿಯವರ ಸರ್ಕಾರದ ನಿರ್ವಹಣೆ ಬಗ್ಗೆ ಚರ್ಚೆ ಮತ್ತು ಸಂವಾದದಲ್ಲಿ ಸರಿಯಾಗಿ ವಿವರಿಸುವ ಪದಗಳನ್ನು ಅಸಂವಿಧಾನಿಕ ಪದಗಳೆಂದು ಪಟ್ಟಿಮಾಡಿ ಮಾತನಾಡುವುದನ್ನು ನಿಷೇಧಿಸಲಾಗಿದೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಜುಮ್ಲಾಜೀವಿ’, ‘ಬಾಲ್ ಬುದ್ಧಿ’, ‘ಕೋವಿಡ್ ಸ್ಪ್ರೆಡರ್’ ಮತ್ತು ‘ಸ್ನೂಪ್‌ಗೇಟ್’ ಸಂಸತ್ತಿಗೆ ಅನರ್ಹವೆಂದು ಪರಿಗಣಿಸಲಾದ ಪದಗಳ ಪಟ್ಟಿಯಲ್ಲಿ ಸೇರಿವೆ. ಪಟ್ಟಿಯು ‘ನಾಚಿಕೆಪಡುವ’, ‘ದುರುಪಯೋಗಪಡಿಸಿಕೊಂಡ, ‘ದ್ರೋಹ’, ‘ಭ್ರಷ್ಟ’, ‘ನಾಟಕ’, ‘ಬೂಟಾಟಿಕೆ’ ಮುಂತಾದ ದೈನಂದಿನ ಅಭಿವ್ಯಕ್ತಿಗಳನ್ನು ಒಳಗೊಂಡಿದೆ. ಅರಾಜಕತಾವಾದಿ, ‘ಶಕುನಿ’, ‘ಸರ್ವಾಧಿಕಾರಿ’, ‘ತಾನಾಶಾ’, ‘ತಾನಶಾಹಿ’, ‘ಜೈಚಂದ್’, ‘ವಿನಾಶ್ ಪುರುಷ’, ‘ಖಾಲಿಸ್ತಾನಿ’ ಮತ್ತು ‘ಖೂನ್ ಸೇ ಖೇತಿ’ ಇವುಗಳನ್ನು ಸಹಸದನದಲ್ಲಿ ಬಳಸಬಾರದೆಂದು ಪಟ್ಟಿ ಮಾಡಲಾಗಿದೆ.

‘ದೋಹ್ರಾ ಚರಿತ್ರ’, ‘ನಿಕಮ್ಮ’, ‘ನೌಟಂಕಿ’, ‘ದಿಂಡೋರಾ ಪೀಟ್ನಾ’ ಮತ್ತು ‘ಬೆಹ್ರಿ ಸರ್ಕಾರ್’  ಪದಗಳನ್ನು ಸಹ ಅಸಂಸದೀಯ ಪದಗಳು.. ಅವುಗಳನ್ನು ಸದನದಲ್ಲಿ ಸಂಸದರು ಬಳಸಿದರೆ ಕಡತದಿಂದ ತೆಗೆದುಹಾಕಲಾಗುತ್ತದೆಂದು ಸೂಚಿಸಲಾಗಿದೆ.

ಸೋಮವಾರದಿಂದ ಪ್ರಾರಂಭವಾಗುವ ಹೊಸ ಅಧಿವೇಶನಕ್ಕೆ ಮುಂಚಿತವಾಗಿ ಬಿಡುಗಡೆಯಾದ ಪದಗಳ ಪಟ್ಟಿಗೆ ಭಾರೀ ವಿರೋಧ ವ್ಯಕ್ತವಾಗಿತು. ತೃಣಮೂಲ ಕಾಂಗ್ರೆಸ್ ನ ಡೆರೆಕ್ ಒ’ಬ್ರಿಯಾನ್ ಅವರು ಪದಗಳನ್ನು ಬಳಸುವುದನ್ನು ಮುಂದುವರಿಸುವುದಾಗಿ ಬಹಿರಂಗ ಸವಾಲು ಹಾಕಿದ್ದಾರೆ.

ಮೋದಿ ಸರ್ಕಾರದ ವಾಸ್ತವವನ್ನು ವಿವರಿಸಲು ಪ್ರತಿಪಕ್ಷಗಳು ಬಳಸುವ ಎಲ್ಲಾ ಪದಗಳನ್ನು ಈಗ ‘ಅಸಂಸದೀಯ’ ಎಂದು ಪರಿಗಣಿಸಲಾಗಿದೆ. ಮುಂದೇನು ವಿಶ್ವಗುರು?,” ಎಂದು ಕರ್ನಾಟಕದ ಸಂಸದ (ರಾಜ್ಯಸಭಾ) ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com