ಕೇರಳ: ನೀಟ್ ಪರೀಕ್ಷೆ ತಪಾಸಣೆ, ಒಳಉಡುಪು ತೆಗೆದು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿನಿಯರಿಗೆ ಒತ್ತಾಯ

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನ ಒಳಉಡುಪು( ಬ್ರಾ) ತೆಗೆದು ಪರೀಕ್ಷೆ ಬರೆಯುವಂತೆ ಒತ್ತಾಯಿಸಿದ ಘಟನೆ ಕೇರಳದಿಂದ ವರದಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲ್ಲಂ(ಕೇರಳ): ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆಯುತ್ತಿದ್ದ ವಿದ್ಯಾರ್ಥಿನಿಯನ್ನ ಒಳಉಡುಪು ತೆಗೆದು ಪರೀಕ್ಷೆ ಬರೆಯುವಂತೆ ಒತ್ತಾಯಿಸಿದ ಘಟನೆ ಕೇರಳದಿಂದ ವರದಿಯಾಗಿದೆ.

ಭಾನುವಾರ ಪರೀಕ್ಷೆ ವೇಳೆ ಭದ್ರತಾ ತಪಾಸಣೆಯ ಸಮಯದಲ್ಲಿ ಮೆಟಲ್ ಡಿಟೆಕ್ಟರ್ ನಲ್ಲಿ ಬೀಪ್ ಸೌಂಡ್ ಮಾಡಿದ್ದರಿಂದ ಪರೀಕ್ಷೆ ಬರೆಯುವ ಮೊದಲು ತನ್ನ ಒಳಉಡುಪು ತೆಗೆಯುವಂತೆ ಒತ್ತಾಯಿಸಲಾಯಿತೆಂದು ಪರೀಕ್ಷಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಆಘಾತಕಾರಿ ಘಟನೆ ಹೊರಬಿದ್ದಿದೆ.

ಕೊಲ್ಲಂ ಜಿಲ್ಲೆಯ NEET (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಕೇಂದ್ರದಲ್ಲಿ, ಮಹಿಳಾ ಭದ್ರತಾ ಸಿಬ್ಬಂದಿ ತನ್ನ ಒಳಉಡುಪು ತೆಗೆದುಹಾಕಬೇಕು ಎಂದು ಹುಡುಗಿಗೆ ಹೇಳಿದ್ದರು. ಅವಳು ವಿರೋಧಿಸಿದಾಗ, ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.

ನಿಮ್ಮ ಭವಿಷ್ಯ ಅಥವಾ ಒಳಉಡುಪು ನಿಮಗೆ ದೊಡ್ಡದಾಗಿದೆಯೇ? ಅದನ್ನು ತೆಗೆದುಹಾಕಿ ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಪರೀಕ್ಷಾರ್ಥಿಗೆ ತಿಳಿಸಲಾಗಿದೆ ಎಂದು ಆಕೆಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದ ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿ ಯಾವುದೇ ಹೊಣೆಗಾರಿಕೆಯನ್ನು ನಿರಾಕರಿಸಿದೆ. ಯುವತಿಯ ಪೋಷಕರು ದೂರು ದಾಖಲಿಸಿದ್ದಾರೆ ಎಂದು ಕೊಲ್ಲಂ ಪೊಲೀಸ್ ಮುಖ್ಯಸ್ಥ ಕೆಬಿ ರವಿ ಖಚಿತಪಡಿಸಿದ್ದಾರೆ. ಹಲವಾರು ಹುಡುಗಿಯರಿಗೆ ತಮ್ಮ ಒಳಉಡುಪುಗಳನ್ನು ತೆಗೆದುಹಾಕಲು ಒತ್ತಾಯಿಸಲಾಗಿದೆ.  ಮತ್ತು ಅವುಗಳನ್ನು ಸ್ಟೋರ್ ರೂಂನಲ್ಲಿ ಬಿಸಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಭದ್ರತಾ ತಪಾಸಣೆಯ ನಂತರ, ಲೋಹ ಶೋಧಕದಿಂದ ಒಳಉಡುಪುಗಳ ಕೊಕ್ಕೆ ಪತ್ತೆಯಾಗಿದೆ. ಆದ್ದರಿಂದ ಅದನ್ನು ತೆಗೆದುಹಾಕಲು ಎಂದು ನನ್ನ ಮಗಳಿಗೆ ಕೇಳಲಾಯಿತು. ಸುಮಾರು 90% ವಿದ್ಯಾರ್ಥಿನಿಯರು ತಮ್ಮ ಒಳಭಾಗವನ್ನು ತೆಗೆದು ಸ್ಟೋರ್ ರೂಂನಲ್ಲಿ ಇರಿಸಬೇಕಾಯಿತು. ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಮಾನಸಿಕವಾಗಿ ತೊಂದರೆಗೀಡಾಗಿದ್ದರು ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

ಪೊಲೀಸರಿಗೆ ಬರೆದ ಪತ್ರದಲ್ಲಿ ಪರೀಕ್ಷೆ ವೇಳೆ ತೆಗೆಸಿದ್ದ ಒಳಉಡುಪುಗಳನ್ನು ಕೋಣೆಯಲ್ಲಿ ಹಾಕಿದ್ದನ್ನು ತನ್ನ ಮಗಳು ತೆಗೆದ ನೋಡಿದ್ದಾಳೆ ಮತ್ತು ಅನೇಕ ಹುಡುಗಿಯರು ಅಲ್ಲಿ ಅಳುತ್ತಿದ್ದರು. ಮಾನಸಿಕ ಹಿಂಸೆ ಅನುಭವಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತಮ್ಮ ಒಳಉಡುಪಿನಲ್ಲಿದ್ದ ಕೊಕ್ಕೆಗಳನ್ನು ಕತ್ತರಿಸಿ ಅದನ್ನು ಕಟ್ಟಿಕೊಳ್ಳುತ್ತಿದ್ದರು. ಇದರಿಂದ ಮಕ್ಕಳ ಮಾನಸಿಕ ಸ್ಥಿತಿಯು ತೊಂದರೆಗೊಳಗಾಗಿದೆ ಮತ್ತು ಅವರು ಆರಾಮವಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಹತ್ತು ಸಾವಿರ ವೈದ್ಯಕೀಯ ಆಕಾಂಕ್ಷಿಗಳಿಗೆ ನೀಟ್  ಭದ್ರತಾ ತಪಾಸಣೆಯನ್ನು ತೆರವುಗೊಳಿಸುವುದು ದೊಡ್ಡ ಸವಾಲಾಗಿದೆ. ಅಭ್ಯರ್ಥಿಗಳು ಸ್ಟೇಷನರಿಯನ್ನು ಕೊಂಡೊಯ್ಯದಂತೆ ಮತ್ತು ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಅನುಸರಿಸಲು ಕೇಳಿಕೊಳ್ಳಲಾಗಿದೆ, ಇದರಲ್ಲಿ ವ್ಯಾಲೆಟ್‌ಗಳು, ಕೈಚೀಲಗಳು, ಬೆಲ್ಟ್ , ಕ್ಯಾಪ್‌ಗಳು, ಆಭರಣಗಳು, ಶೂಗಳು ಮತ್ತು ಹೀಲ್ಸ್ ಅನ್ನು ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com