ಸಂಜಯ್ ರಾವತ್
ಸಂಜಯ್ ರಾವತ್

ಶಿವಸೇನೆ ಪಕ್ಷಕ್ಕಾಗಿ, ಚಿಹ್ನೆಗಾಗಿ ಹೋರಾಟಕ್ಕೆ ಸಿದ್ಧ: ಸಂಜಯ್ ರಾವತ್

ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ರಾಜಕೀಯದಿಂದಾಗಿ ಎರಡು ಬಣಗಳಾಗಿರುವ ಶಿವಸೇನೆಯಲ್ಲಿ ಇದೀಗ ಪಕ್ಷ ನಿಯಂತ್ರಣ ಹಾಗೂ ಚಿಹ್ನೆ ಯಾವ ಬಣಕ್ಕೆ ಹೋಗಬೇಕು ಎಂಬ ವಿಚಾರ ಕಾನೂನು ಸಮರಕ್ಕೆ ವೇದಿಕೆಯಾಗಿದೆ.

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ರಾಜಕೀಯದಿಂದಾಗಿ ಎರಡು ಬಣಗಳಾಗಿರುವ ಶಿವಸೇನೆಯಲ್ಲಿ ಇದೀಗ ಪಕ್ಷ ನಿಯಂತ್ರಣ ಹಾಗೂ ಚಿಹ್ನೆ ಯಾವ ಬಣಕ್ಕೆ ಸೇರಬೇಕು ಎಂಬ ವಿಚಾರ ಕಾನೂನು ಸಮರಕ್ಕೆ ವೇದಿಕೆಯಾಗಿದೆ. ಈ ನಡುವೆ ಮಂಗಳವಾರ ಪ್ರತಿಕ್ರಿಯಿಸಿರುವ ಶಿವಸೇನಾ ಹಿರಿಯ ಮುಖಂಡ ಸಂಜಯ್ ರಾವತ್, ಪಕ್ಷ ನಿಯಂತ್ರಣ ಹಾಗೂ ಚಿಹ್ಹೆಗಾಗಿ ಹೋರಾಟ ನಡೆಸಲು ಸಿದ್ದರಾಗಿರುವುದಾಗಿ ತಿಳಿಸಿದ್ದಾರೆ.

ಮಹಾರಾಷ್ಟ್ರವನ್ನು ಮೂರು ತುಂಡಾಗಿ ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಶಿವಸೇನೆಯನ್ನು ವಿಭಜಿಸಿವುದು ಕೇಸರಿ ಪಕ್ಷದ ಪಿತೂರಿ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ತಲೆದೋರಿ ಸಂಕಷ್ಟ ಅನುಭವಿಸುತ್ತಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಶಿವಸೇನಾ ಸಂಸದಸೀಯ ಪಕ್ಷವನ್ನು ಹೊಡೆಯುವ ಪ್ರಯತ್ನ ಮಾಡುತ್ತಿರುವುದಾಗಿ ಆರೋಪಿಸಿದರು. 

ಕೆಲವು ಸಂಸದರು, ಶಾಸಕರು ಪಕ್ಷ ತೊರೆಯಬಹುದು, ಆದರೆ, ಆದರೆ ಶಾಸಕರು ಮತ್ತು ಸಂಸದರು ಮಾತ್ರ ಶಿವಸೇನೆಯನ್ನು ರೂಪಿಸುವುದಿಲ್ಲ. ಮುಂದಿನ ಯಾವುದೇ ಚುನಾವಣೆಯಲ್ಲಿ ಬಂಡಾಯ ಶಾಸಕರು ಗೆಲ್ಲದಂತೆ ಶಿವ ಸೈನಿಕರು ಮಾಡಲಿದ್ದಾರೆ ಎಂದರು. 

ಶಿವಸೇನಾ ಸಂಸದೀಯ ಪಕ್ಷವೂ ಬಣಗಳಾಗಿ ರೂಪುಗೊಳ್ಳುತ್ತಿದೆ, ಬಂಡಾಯ ಬಣವು ರಾಹುಲ್ ಶೆವಾಲೆ ಅವರನ್ನು ತಮ್ಮ ನಾಯಕನನ್ನಾಗಿ ಪ್ರತ್ಯೇಕ ಗುಂಪಾಗಿ ಗುರುತಿಸಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲು   ಸಿದ್ಧವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com