ಕಲ್ಲಕುರಿಚಿ(ತಮಿಳು ನಾಡು): ತಮಿಳು ನಾಡಿನ ಕಲ್ಲಕುರಿಚಿಯಲ್ಲಿ ಖಾಸಗಿ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಶಾಲೆಯ ಕಾರ್ಯದರ್ಶಿ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಅಧಿಕಾರಿಗಳು ಮತ್ತು ಇಬ್ಬರು ಶಿಕ್ಷಕರನ್ನು 15 ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪ್ರೌಢಶಾಲೆ ನಿರ್ದೇಶನಾಲಯ 987 ಖಾಸಗಿ ಶಾಲೆಗಳಿಗೆ ನೊಟೀಸ್ ನೀಡಿದ್ದು ಸರ್ಕಾರದ ಸೂಚನೆಗೆ ವಿರುದ್ಧ ಶಾಲೆಗಳನ್ನು ಮುಚ್ಚುವ ಕುರಿತು ವಿವರಣೆ ಕೋರಿದ್ದಾರೆ.
ಕಲ್ಲಕುರಿಚಿಯ ಕಣಿಯಮೂರು ಶಕ್ತಿ ಖಾಸಗಿ ಶಾಲೆಯ ಮೇಲೆ ದಾಳಿಗೆ ಸಂಬಂಧಪಟ್ಟಂತೆ ಎಲ್ಲಾ ಖಾಸಗಿ ನರ್ಸರಿ, ಪ್ರೌಢಶಿಕ್ಷಣ ಮತ್ತು ಸಿಬಿಎಸ್ ಇ ಶಾಲೆಗಳನ್ನು ಮುಚ್ಚಿ ಈಗಾಗಲೇ ಪ್ರತಿಭಟನೆ ನಡೆಸಲಾಗಿದೆ.
Advertisement