68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; 'ತಾನಾಜಿ' ಅಜಯ್ ದೇವಗನ್, 'ಸೂರರೈ ಪೋಟ್ರು' ಸೂರ್ಯ ಶ್ರೇಷ್ಠ ನಟ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, 'ತಾನಾಜಿ' ಚಿತ್ರದ ಅಮೋಘ ಅಭಿನಯಕ್ಕಾಗಿ ಅಜಯ್ ದೇವಗನ್ ಗೆ ಮತ್ತು 'ಸೂರರೈಪೋಟ್ರು' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟ ಸೂರ್ಯಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಸೂರರೈಪೋಟ್ರು-ತಾನ್ಹಾಜಿಗೆ ಪ್ರಶಸ್ತಿ
ಸೂರರೈಪೋಟ್ರು-ತಾನ್ಹಾಜಿಗೆ ಪ್ರಶಸ್ತಿ

ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, 'ತಾನಾಜಿ' ಚಿತ್ರದ ಅಮೋಘ ಅಭಿನಯಕ್ಕಾಗಿ ಅಜಯ್ ದೇವಗನ್ ಗೆ ಮತ್ತು 'ಸೂರರೈ ಪೋಟ್ರು' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ನಟ ಸೂರ್ಯಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.

ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದ್ದು, ನಟ ಸೂರ್ಯ ಅಭಿನಯದ ಸೂರರೈಪೋಟ್ರು ಚಿತ್ರ ಐದು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಉತ್ತಮ ನಟ (ಸೂರ್ಯ-ಸೂರರೈ ಪೋಟ್ರು), ಅತ್ಯುತ್ತಮ ಚಲನಚಿತ್ರ-ಸೂರರೈ ಪೋಟ್ರು, ಅತ್ಯುತ್ತಮ ಹಿನ್ನಲೆ ಸಂಗೀತ-(ಜಿವಿ ಪ್ರಕಾಶ್ ಕುಮಾರ್) (ಚಿತ್ರ- ಸೂರರೈ ಪೋಟ್ರು), ಅತ್ಯುತ್ತಮ ನಟಿ- ಅಪರ್ಣಾ ಬಾಲಮುರಳಿ (ಚಿತ್ರ-ಸೂರರೈ ಪೋಟ್ರು), ಅತ್ಯುತ್ತಮ ಚಿತ್ರಕಥೆ-ಶಾಲಿನಿ ಉಷಾ ನಾಯರ್ ಕೊಂಗರ (ಚಿತ್ರ-ಸೂರರೈ ಪೋಟ್ರು) ವಿಭಾಗಗಳಲ್ಲಿ ಚಿತ್ರ ಪ್ರಶಸ್ತಿ ಗೆದ್ದಿದೆ.

ಹಿಂದಿಯ ಅಜಯ್ ದೇವಗನ್ ಅವರು ತಾನಾಜಿ ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ತೆಲುಗಿನ ಅಲಾವೈಕುಂಠಪುರಂಲೋ ಚಿತ್ರ ಹಾಡಿನ ಸಂಗೀತ ನಿರ್ದೇಶನಕ್ಕಾಗಿ ಸಂಗೀತ ನಿರ್ದೇಶಕ ತಮನ್ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ (ಹಾಡು) ಪ್ರಶಸ್ತಿ ಲಭಿಸಿದೆ. ತಮಿಳಿನ ಮಂಡೇಲಾ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ಚಿತ್ರ ನಿರ್ದೇಶನ ವಿಭಾಗದಲ್ಲಿ ಮಡೋನ್ನೆ ಅಶ್ವಿನ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಇನ್ನು ತೆಲುಗಿನ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಕಲರ್ ಫೋಟೋ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com