'ಫ್ರೈ ಆಗಲು ಕೋಳಿ ಸ್ವತಃ ಮನೆಗೆ ಬಂದಿದೆ': ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಮನಿ ಲಾಂಡರಿಂಗ್ ಕಾಯ್ದೆ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ತೀರ್ಪು ಪಿ ಚಿದಂಬರಂ ಮತ್ತು ಇತರ ನಾಯಕರಿಗೆ, ‘ಫ್ರೈ ಆಗಲು ಕೋಳಿ ಸ್ವತಃ ಮನೆಗೆ ಬಂದಿದೆ’ ಅನ್ನೋ ರೀತಿಯಲ್ಲಿದೆ ಎಂದು ಹೋಲಿಕೆ ಮಾಡಿಕೆ ವಾಗ್ದಾಳಿ ನಡೆಸಿದ್ದಾರೆ. ಯುಪಿಎ ಸರ್ಕಾರದ ಅಧಿಕಾರವಧಿಯಲ್ಲಿ ಇಡಿಯನ್ನು ಸಶಕ್ತಗೊಳಿಸಿದ್ದು ಪಿ.ಚಿದಂಬರಂ ಎಂತಲೂ ಅವರು ತಿಳಿಸಿದ್ದಾರೆ.
ಪಿಎಂಎಲ್‌ಎ ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಇಡಿ ಎಲ್ಲಾ ಅಧಿಕಾರಿಗಳನ್ನು ಸಹ ಉಳಿಸಿಕೊಳ್ಳಲಾಗಿದೆ.
ನ್ಯಾಯಾಲಯದ ತೀರ್ಪಿನ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, “ಸುಪ್ರೀಂ ಕೋರ್ಟ್ ಪಿಎಂಎಲ್‌ಎ ಮತ್ತು ಇಡಿ ಅಧಿಕಾರ ವ್ಯಾಪ್ತಿಯನ್ನು ಎತ್ತಿಹಿಡಿದಿದೆ. ಕಾನೂನು ತನ್ನ ಕೆಲಸವನ್ನು ಮಾಡುತ್ತಿದೆ. ಒಂದು ಕುಟುಂಬ, ಕಾನೂನಿನಗಿಂತ ಮಿಗಿಲು ಅನ್ನೋ ಕಾಂಗ್ರೆಸ್ನ ಪ್ರಯತ್ನ ಫಲಿಸುವುದಿಲ್ಲ. ನಾವು ದೇಶದ ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ನ ಪ್ರತಿಭಟನೆ ಮಾಡುತ್ತಿರುವುದು ಸತ್ಯವನ್ನು ಮರೆಮಾಚುವ ಪ್ರಯತ್ನ ಎಂದು ಹೇಳಿದ ನಡ್ಡಾ, ಅವರು ಪ್ರತಿಭಟಿಸುತ್ತಿರುವುದು ಒಂದು ಕುಟುಂಬದ ರಕ್ಷಣೆಗಾಗಿಯೇ ಹೊರತು ದೇಶವನ್ನಲ್ಲ. ಗಾಂಧಿ ಕುಟುಂಬವು ತನಿಖಾ ಸಂಸ್ಥೆಗಳಿಗೆ ಉತ್ತರಿಸಬೇಕು, ಆದರೆ ಅವರು ಕಾನೂನಿಗಿಂತ ಮೇಲಿನವರು ಎಂದು ಅವರು ಭಾವಿಸುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ