ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್, ಬಂಧನದ ವೇಳೆ ಇಸಿಐಆರ್ ಕಡ್ಡಾಯವಲ್ಲ

ಪ್ರಕರಣದ ಅಡಿಯ ಯಾವುದೇ ಆರೋಪಿಗಳಿಗೆ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ನೀಡುವುದು ಕಡ್ಡಾಯವಲ್ಲ ಮತ್ತು ಅದನ್ನು ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ಹೋಲಿಸಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯ ಎಲ್ಲ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ. ಅಲ್ಲದೆ,  ಪ್ರತಿ ಪ್ರಕರಣದಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ) ಅನ್ನು ನೀಡುವುದು ಕಡ್ಡಾಯವಲ್ಲ ಎಂದು ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ನ್ಯಾಯಪೀಠ, ಈ ಕಾನೂನನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 241 ಅರ್ಜಿಗಳನ್ನು ಆಲಿಸಿತು. ಸೆಕ್ಷನ್ 3 (ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿಯ ಮುಟ್ಟುಗೋಲು), 8(4) [ಆಸ್ತಿ ಸ್ವಾಧೀನಪಡಿಸಿಕೊಳ್ಳುವುದು), 17 (ಹುಡುಕಾಟ ಮತ್ತು ವಶಪಡಿಸಿಕೊಳ್ಳುವಿಕೆ), 18 (ವ್ಯಕ್ತಿಗಳ ಹುಡುಕಾಟ), 19 (ಬಂಧನದ ಅಧಿಕಾರ), 24 (ಸಾಕ್ಷ್ಯಗಳ ಹೊರೆ), 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 (ಜಾಮೀನು ಸಿಗುವ ಅಪರಾಧಗಳು ಮತ್ತು ಜಾಮೀನು ಪಡೆಯಲಾಗವುಗಳು) ಗಳ ಸಿಂಧುತ್ವವನ್ನು ಎತ್ತಿಹಿಡಿದಿರುವುದಾಗಿ ವರದಿ ಹೇಳಿದೆ.

ಪ್ರಕರಣದ ಅಡಿಯಲ್ಲಿ ಯಾವುದೇ ಆರೋಪಿಗಳಿಗೆ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ನೀಡುವುದು ಕಡ್ಡಾಯವಲ್ಲ ಮತ್ತು ಅದನ್ನು ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ಹೋಲಿಸಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

'ಆರೋಪಿಗಳಿಗೆ ECIR ಪೂರೈಕೆ ಕಡ್ಡಾಯವಲ್ಲ. ಆರೋಪಿಗಳ ಬಂಧನದ ಸಮಯದಲ್ಲಿ ಕಾರಣಗಳು ಅಥವಾ ಆಧಾರಗಳನ್ನು ಬಹಿರಂಗಪಡಿಸಿದರೆ ಸಾಕು. ಆಂತರಿಕ ದಾಖಲೆಯಾಗಿರುವ ಇ.ಡಿ ಕೈಪಿಡಿಯನ್ನು ಕೂಡ ಪ್ರಕಟಿಸಬಾರದು' ಎಂದು ಅದು ಹೇಳಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಆರೋಪಿಗಳ ಬಂಧನದ ಹಿನ್ನೆಲೆಯನ್ನು ತಮಗೆ ತಿಳಿಸದೆ ಅಥವಾ ಪುರಾವೆ ಇಲ್ಲದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರವು ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ಈ ಮೂಲಕ ಅರ್ಜಿದಾರರಿಗೆ ಹಿನ್ನಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com