ಭುವನೇಶ್ವರ್: ಭಾರತ ಜೂ.24 ರಂದು ಮೇಲ್ಮೈ ನಿಂದ ಆಗಸಕ್ಕೆ ಚಿಮ್ಮುವ ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದಿಂದ ಯಶಸ್ವಿಯಾಗಿ ನಡೆಸಿದೆ.
ಭಾರತೀಯ ನೌಕಾಪಡೆ ಹಡಗು (ಐಎನ್ಎಸ್) ಮೂಲಕ ಚಂಡೀಪುರದಲ್ಲಿ ಈ ಪರೀಕ್ಷೆ ನಡೆದಿದೆ.
ಭಾರತೀಯ ನೌಕಾಪಡೆ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ (ವಿಎಲ್-ಎಸ್ ಆರ್ಎಸ್ಎಎಂ) ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ವಿಎಲ್-ಎಸ್ ಆರ್ ಎಸ್ಎಎಂ ಹಡಗಿನ ಮೂಲಕ ಕಾರ್ಯನಿರ್ವಹಿಸುವ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದ್ದು, ಸೀ ಸ್ಕಿಮ್ಮಿಂಗ್ ಟಾರ್ಗೆಟ್ ಸೇರಿದಂತೆ ವಾಯುಪಡೆಯ ಮೂಲಕ ಎದುರಾಗುವ ಹಲವು ಅಪಾಯಗಳನ್ನು ನಿಗ್ರಹಿಸಲು ಬಳಸುವುದಾಗಿದೆ.
ಇಂದು ಈ ವ್ಯವಸ್ಥೆಯ ಉಡಾವಣೆಯನ್ನು ವಾಯುಪಡೆಯ ಮಾದರಿಯ ಅತಿ ವೇಗದ ಟಾರ್ಗೆಟ್ ನ ವಿರುದ್ಧ ಪ್ರಯೋಗಿಸುವ ಮೂಲಕ ಪರೀಕ್ಷೆ ನಡೆಸಲಾಗಿದ್ದು ಯಶಸ್ವಿಯಾಗಿದೆ
ಐಟಿಆರ್ ಚಂಡೀಪುರದಿಂದ ನಿಯೋಜಿಸಲಾಗಿದ್ದ ಉಪಕರಣಗಳ ಮೂಲಕ ಉಡಾಯಿಸಲಾದ ವಾಹನದ ಪಥದ ನಿಗಾವಹಿಸಲಾಗಿತ್ತು, ಪರೀಕ್ಷಾರ್ಥ ಪ್ರಯೋಗವನ್ನು ಡಿಆರ್ ಡಿಒ ಹಾಗೂ ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಗಳು ನಿಗಾ ವಹಿಸಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ ಡಿಒ ಹಾಗೂ ಭಾರತೀಯ ನೌಕಾಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿಎಲ್-ಎಸ್ಆರ್ ಎಸ್ಎಎಂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿ ವ್ಯವಸ್ಥೆಯಾಗಿದ್ದು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.
Advertisement