ಉದ್ಧವ್ ಠಾಕ್ರೆ ಗೂಂಡಾಗಿರಿ ಕೊನೆಗಾಣಿಸಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಂಸದೆ ನವನೀತ್ ರಾಣಾ ಮನವಿ!

ಮಹಾರಾಷ್ಟ್ರದ ಅಮರಾವತಿ ಸಂಸದೆ ನವನೀತ್ ರಾಣಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಗೂಂಡಾಗಿರಿಯನ್ನು ಕೊನೆಗಾಣಿಸುವಂತೆ ಅವರು ಗೃಹ ಸಚಿವರಿಗೆ ಮನವಿ ಮಾಡಿದರು.
ನವನೀತ್ ಕೌರ್
ನವನೀತ್ ಕೌರ್
Updated on

ಮುಂಬೈ: ಮಹಾರಾಷ್ಟ್ರದ ಅಮರಾವತಿ ಸಂಸದೆ ನವನೀತ್ ರಾಣಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಗೂಂಡಾಗಿರಿಯನ್ನು ಕೊನೆಗಾಣಿಸುವಂತೆ ಅವರು ಗೃಹ ಸಚಿವರಿಗೆ ಮನವಿ ಮಾಡಿದರು.

ಬಂಡುಕೋರರಲ್ಲಿ ಒಬ್ಬರಾದ ತಾನಾಜಿ ಸಾವಂತ್ ಗೆ ಸೇರಿದ ಪುಣೆಯ ಕಚೇರಿಯನ್ನು ಶಿವಸೇನೆಯ ಕಾರ್ಯಕರ್ತರು ಧ್ವಂಸಗೊಳಿಸಿದರು. ಈ ಹಿನ್ನೆಲೆ ಮಾತನಾಡಿರುವ ನವನೀತ್ ರಾಣಾ ಅವರು, ಶಿವಸೇನೆ ಮತ್ತು ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂಧೆ ಅವರನ್ನು ಅನುಸರಿಸಿದ ಶಾಸಕರ ಕುಟುಂಬಗಳಿಗೆ ಭದ್ರತೆ ಒದಗಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿದ್ದಾರೆ.

ದಾಳಿಯನ್ನು ಸೇನೆಯ ಪುಣೆಯ ಮುಖ್ಯಸ್ಥ ಸಂಜಯ್ ಮೋರೆ ದೃಢಪಡಿಸಿದ್ದು, ನಮ್ಮ ಪಕ್ಷದ ಕಾರ್ಯಕರ್ತರು ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ನಮ್ಮ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ತೊಂದರೆ ನೀಡಿದ ಎಲ್ಲಾ ದೇಶದ್ರೋಹಿಗಳು ಮತ್ತು ಬಂಡಾಯ ಶಾಸಕರು ಈ ರೀತಿಯ ಕ್ರಮವನ್ನು ಎದುರಿಸಬೇಕಾಗುತ್ತದೆ. ಕಚೇರಿಯ ಮೇಲೂ ದಾಳಿ ನಡೆಸಲಾಗುವುದು, ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆ ಅವರನ್ನು ತೊರೆದು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ, ಬಾಳಾಸಾಹೇಬ್ ಅವರ ಸಿದ್ಧಾಂತದ ಪರಿಪಾಲನೆಯಲ್ಲಿರುವ ಶಾಸಕರ ಕುಟುಂಬಗಳಿಗೆ ಅಮಿತ್ ಶಾ ಅವರು ಭದ್ರತೆ ನೀಡಬೇಕು. ಉದ್ಧವ್ ಠಾಕ್ರೆ ಅವರ ಗೂಂಡಾವಾದವನ್ನು ಕೊನೆಗೊಳಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com