ಉದ್ದವ್ ಠಾಕ್ರೆ
ಉದ್ದವ್ ಠಾಕ್ರೆ

ಶಿವಸೇನೆ ಇಬ್ಭಾಗ! ಯಾರೂ ಬಾಳಸಾಹೇಬ್ ಹೆಸರು ಬಳಸಕೂಡದು ಎಂದ ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಸರ್ಕಾರದಲ್ಲಿನ ಬಿಕ್ಕಟ್ಟಿನ ನಡುವೆ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಹೆಸರು ನೀಡಲು ಮುಂದಾಗಿದ್ದು, ಯಾರೂ ಕೂಡಾ ಪಕ್ಷದ ಸಂಸ್ಥಾಪಕರ ಹೆಸರನ್ನು ಬಳಸಕೂಡದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಖಡಕ್ ಸಂದೇಶ ರವಾನಿಸಿದ್ದಾರೆ.
Published on

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಸರ್ಕಾರದಲ್ಲಿನ ಬಿಕ್ಕಟ್ಟಿನ ನಡುವೆ ಬಂಡಾಯ ಶಾಸಕ ಏಕನಾಥ್ ಶಿಂಧೆ ತಮ್ಮ ಬಣಕ್ಕೆ ಶಿವಸೇನೆ ಬಾಳಾಸಾಹೇಬ್ ಹೆಸರು ನೀಡಲು ಮುಂದಾಗಿದ್ದು, ಯಾರೂ ಕೂಡಾ ಪಕ್ಷದ ಸಂಸ್ಥಾಪಕರ ಹೆಸರನ್ನು ಬಳಸಕೂಡದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಖಡಕ್  ಸಂದೇಶ ರವಾನಿಸಿದ್ದಾರೆ.

ಶಿವಸೇನೆ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಅವರು, 'ಏನಾದರೂ ಹೇಳುವಂತೆ ಕೆಲವರು ನನನ್ನು ಕೇಳುತ್ತಿದ್ದಾರೆ. ಆದರೆ, ಬಂಡಾಯ ಶಾಸಕರು ತಮ್ಮಗಿಷ್ಟ ಬಂದಂತೆ ಮಾಡಲಿ ಎಂದು ಈಗಾಗಲೇ ಹೇಳಿದ್ದೇನೆ. ಅವರ ವಿಚಾರದಲ್ಲಿ ನಾನು ಮಧ್ಯ ಪ್ರವೇಶ ಮಾಡಲ್ಲ. ಅವರು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆದರೆ, ಯಾರೂ ಕೂಡಾ ಬಾಳಸಾಹೇಬ್ ಠಾಕ್ರೆ ಹಸರು ಬಳಸಬಾರದು ಎಂದರು. 

ಏಕನಾಥ್ ಶಿಂಧೆ ಶಿವಸೇನೆಯ ಮತ್ತೊಂದು ಬಣಕ್ಕೆ ಹೆಸರು ನೀಡಿರುವುದು ಶಿವಸೇನೆ ಇಬ್ಭಾಗವಾಗುತ್ತಿರುವುದರ ಲಕ್ಷಣ ಎಂದು ವಿಶ್ಲೇಷಿಸಲಾಗುತ್ತಿದೆ. 

X

Advertisement

X
Kannada Prabha
www.kannadaprabha.com