ಮೂಸೆವಾಲಾ ಹತ್ಯೆ ಪ್ರಕರಣ: ವಕೀಲರು ಸಿಗ್ತಿಲ್ಲ, ಕೇಸ್ ವಿಚಾರಣೆ ದೆಹಲಿಗೆ ವರ್ಗಾಯಿಸಿ ಎಂದ ಬಿಷ್ಣೋಯಿ ತಂದೆ

ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ತಂದೆ ಪಂಜಾಬ್ ಪೊಲೀಸರ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಧು ಮೂಸೆವಾಲಾ
ಸಿಧು ಮೂಸೆವಾಲಾ

ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ತಂದೆ ಪಂಜಾಬ್ ಪೊಲೀಸರ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯದಲ್ಲಿ ಜುಲೈ 11ರಂದು ಪ್ರಕರಣದ ವಿಚಾರಣೆ ನಡೆಸಲಿದೆ. ಗಾಯಕನ ಹತ್ಯೆ ಪ್ರಕರಣದಲ್ಲಿ ಯಾವುದೇ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಸ್ಥಳೀಯ ವಕೀಲರ ಸಂಘ ನಿರ್ಧಾರಿಸಲಾಗಿದೆ. ಹೀಗಾಗಿ ಪಂಜಾಬ್‌ನ ಮಾನ್ಸಾ ನ್ಯಾಯಾಲಯದಲ್ಲಿ ದರೋಡೆಕೋರರ ಪರ ವಕೀಲರನ್ನು ಹುಡುಕಲಾಗುತ್ತಿಲ್ಲ ಎಂದು ಲಾರೆಲ್ಸ್ ತಂದೆ ಲವಿಂದರ್ ಬಿಷ್ಣೋಯ್ ಪರ ವಕೀಲ ಸಂಗ್ರಾಮ್ ಸಿಂಗ್ ಮನವಿಯಲ್ಲಿ ತಿಳಿಸಿದ್ದಾರೆ.

ಲಾರೆನ್ಸ್ ಬಿಷ್ಣೋಯಿಯನ್ನು ಪಂಜಾಬ್‌ಗೆ ವರ್ಗಾಯಿಸಲು ಕಾರಣವಾದ ದೆಹಲಿ ನ್ಯಾಯಾಲಯ ಹೊರಡಿಸಿದ ಟ್ರಾನ್ಸಿಟ್ ರಿಮಾಂಡ್ ಅನ್ನು ಬಿಷ್ಣೋಯ್ ಅವರ ತಂದೆ ಪ್ರಶ್ನಿಸಿದ್ದಾರೆ. ಇನ್ನೊಂದು ಪ್ರಕರಣದ ಹಿಂದಿನ ತೀರ್ಪಿನಲ್ಲಿ ಲಾರೆನ್ಸ್  ಬಿಷ್ಣೋಯಿಯನ್ನು ಪಂಜಾಬ್‌ಗೆ ಕರೆದೊಯ್ಯಬಾರದು ಎಂಬ ಅಂಶವನ್ನು ಅರ್ಜಿದಾರರು ವಾದಿಸಿದ್ದಾರೆ. ಬಿಷ್ಣೋಯಿಯನ್ನು ರಾಷ್ಟ್ರ ರಾಜಧಾನಿಯಲ್ಲೂ ವಿಚಾರಣೆ ನಡೆಸಬಹುದು ಎಂದು ಅವರ ತಂದೆ ಹೇಳಿದ್ದಾರೆ.

ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠವು, ಪಂಜಾಬ್‌ನಲ್ಲಿ ಕೊಲೆ ನಡೆದಾಗ, ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದರು. ಅರ್ಜಿದಾರರು ಕಾನೂನು ಸಹಾಯಕ್ಕಾಗಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.

ಮೂಸೆ ವಾಲಾ ಅವರ ಭೀಕರ ಹತ್ಯೆಯ ನಂತರ ಪಂಜಾಬ್‌ನ ಮಾನ್ಸಾದಲ್ಲಿನ ಸ್ಥಳೀಯ ವಕೀಲರ ಸಂಘವು ಯಾವುದೇ ಸದಸ್ಯ ವಕೀಲರು ಆರೋಪಿಗಳನ್ನು ಪ್ರತಿನಿಧಿಸುವುದಿಲ್ಲ ಎಂದು ನಿರ್ಣಯವನ್ನು ಅಂಗೀಕರಿಸಿದೆ. ವಕೀಲರ ಸಮಿತಿಯು ಸಿಧು ಅವರ ಕುಟುಂಬಕ್ಕೆ ಕಾನೂನುಬದ್ಧವಾಗಿ ಉಚಿತವಾಗಿ ಸಹಾಯ ಮಾಡುತ್ತದೆ ಎಂಬ ನಿರ್ಣಯ ಕೈಗೊಂಡಿದೆ.

ಮೇ 29 ರಂದು ಮಾನ್ಸಾದಲ್ಲಿ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪಂಜಾಬ್ ಸರ್ಕಾರವು ಅವರ ಮತ್ತು 400ಕ್ಕೂ ಹೆಚ್ಚು ಇತರ ವಿಐಪಿಗಳ ಭದ್ರತೆಯನ್ನು ವಿಐಪಿ ಸಂಸ್ಕೃತಿಯ ವಿರುದ್ಧದ ಕ್ರಮ ಎಂದು ವಾಪಸ್ ಪಡೆದ ಮರುದಿನವೇ ಮೂಸೆವಾಲಾ ಭೀಕರವಾಗಿ ಹತ್ಯೆಯಾಗಿದ್ರು.

ಹೈ ಪ್ರೊಫೈಲ್ ಕೊಲೆ ಪ್ರಕರಣದ ತನಿಖೆಯು ಬಿಷ್ಣೋಯಿ ಹೆಸರನ್ನು ಉಲ್ಲೇಖಿಸಿದೆ. ಗ್ಯಾಂಗ್ ಸ್ಟರ್  ಬಿಷ್ಣೋಯ್, ಸಹಚರನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ದೆಹಲಿಯ ತಿಹಾರ್ ಜೈಲಿನ ಒಳಗಿನಿಂದ ಅಪರಾಧವನ್ನು ಸಂಚು ರೂಪಿಸಿದ್ದನೆಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com