ಮೂಸೆವಾಲ ಹತ್ಯೆಗೆ ಗಡಿಯಾಚೆಯಿಂದ ಮಾರಕಾಸ್ತ್ರಗಳ ಪೂರೈಕೆ!

ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಕೊಲೆಗಡುಕರ ಕೈಗೆ ಸೇರಿದ್ದು ಗಡಿಯಾಚೆಯಿಂದ ಎಂಬ ಅಂಶ ದೆಹಲಿ ಪೊಲೀಸರ ಗಮನಕ್ಕೆ ಬಂದಿದೆ. 
ಸಿಧು ಮೂಸೆವಾಲಾ
ಸಿಧು ಮೂಸೆವಾಲಾ

ದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಕೊಲೆಗಡುಕರ ಕೈಗೆ ಸೇರಿದ್ದು ಗಡಿಯಾಚೆಯಿಂದ ಎಂಬ ಅಂಶ ದೆಹಲಿ ಪೊಲೀಸರ ಗಮನಕ್ಕೆ ಬಂದಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಸೋಮವಾರದಂದು ಇಬ್ಬರು ಪ್ರಮುಖ ಶೂಟರ್ ಗಳೂ ಸೇರಿದಂತೆ ಮೂವರನ್ನು ಬಂಧಿಸಿದ್ದರು.  ಇದೇ ದಿನದಂದು ಕೋರ್ಟ್ ಮೂವರನ್ನೂ 14 ದಿನಗಳ ಕಾಲ ವಿಶೇಷ ಸೆಲ್ ವಶಕ್ಕೆ ನೀಡಿ ಆದೇಶಿಸಿತ್ತು. 

ಮೂಸೆವಾಲ ಹತ್ಯೆಗೆ ಬಳಕೆ ಮಾಡಲಾದ ಮಾರಕಾಸ್ತ್ರಗಳು ಗಡಿಯಾಚೆಯಿಂದ ಪೂರೈಕೆಯಾಗಿತ್ತು ಎಂಬ ಮಾಹಿತಿಯನ್ನು ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಸೆಲ್ ಪಡೆದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 50 ಸುತ್ತಿನ 8 ಅತ್ಯಾಧುನಿಕ ಸ್ಫೋಟಕ ಗ್ರೆನೇಡ್ ಗಳು ಹಾಗೂ ಗ್ರೆನೇಡ್ ಲಾಂಚರ್ ಗಳು, 9 ಎಲೆಕ್ಟ್ರಿಕ್ ಡೆಟೋನೇಟರ್ ಗಳನ್ನು ವಶಕ್ಕೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com