ಇದೇ ಕಾರಣದಿಂದ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ! ಪಕ್ಷದ ಮುಖಂಡರು ಏನಂತಾರೆ?

ಉತ್ತಮ ಸಾರ್ವಜನಿಕ ಸೇವೆಗಳು, ಉತ್ತಮ ಗುಣಮಟ್ಟದ ಶಾಲೆಗಳು ಮತ್ತು ಆಸ್ಪತ್ರೆಗಳ ಭರವಸೆಯೊಂದಿಗೆ ದೆಹಲಿಯಲ್ಲಿ ಎಎಪಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,ಮನೀಶ್ ಸಿಸೋಡಿಯಾ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,ಮನೀಶ್ ಸಿಸೋಡಿಯಾ

ನವದೆಹಲಿ: ಉತ್ತಮ ಸಾರ್ವಜನಿಕ ಸೇವೆಗಳು, ಉತ್ತಮ ಗುಣಮಟ್ಟದ ಶಾಲೆಗಳು ಮತ್ತು ಆಸ್ಪತ್ರೆಗಳ ಭರವಸೆಯೊಂದಿಗೆ ದೆಹಲಿಯಲ್ಲಿ ಎಎಪಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲೂ ಇದೇ ಭರವಸೆಗಳೊಂದಿಗೆ ಸತತವಾಗಿ ಪ್ರಚಾರ ನಡೆಸಲಾಗಿತ್ತು,  ಇದೇ ಕಾರಣದಿಂದ ಪಕ್ಷ ಅಲ್ಲಿಯೂ ಜಯಭೇರಿ ಬಾರಿಸುವಲ್ಲಿ ಯಶಸ್ಸು ಕಂಡಿದೆ. 

ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳದೊಂದಿಗೆ ಬಹುಕೋನದ ಸ್ಪರ್ಧೆಯಲ್ಲಿ ಸಿಲುಕಿದ್ದ ಕೇಜ್ರಿವಾಲ್, ದೆಹಲಿಯಲ್ಲಿನ ತನ್ನ ಆಡಳಿತದ ಮಾದರಿಯಿಂದ 10 ಅಂಶಗಳ 'ಪಂಜಾಬ್ ಮಾದರಿ'ಯನ್ನು ಅನಾವರಣಗೊಳಿಸಿದ್ದರು ಮತ್ತು ಹೊಸ ಕಾಲದ, ಸಮೃದ್ಧ ಮತ್ತು ಪಂಜಾಬ್ ಅಭಿವೃದ್ಧಿಯ ಭರವಸೆಯನ್ನು ಮತದಾರರಿಗೆ ನೀಡಿದ್ದರು. 

ಇದನ್ನೂ ಓದಿ: ಕ್ಯಾಪ್ಟನ್ ಅಮರೀಂದರ್ ಸಿಂಗ್ ನಾಯಕ್ವತದಡಿಯ ಆಡಳಿತ ವಿರೋಧಿ ಅಲೆಯಿಂದ ಪಂಜಾಬ್ ನಲ್ಲಿ ಸೋಲು- ಕಾಂಗ್ರೆಸ್ 
ಇಡೀ ದೇಶವೇ ಈಗ ದೆಹಲಿಯ ಕೇಜ್ರಿವಾಲ್ ಆಡಳಿತದ ಮಾದರಿಯನ್ನು ಎದುರು ನೋಡುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರೆ, ಕೇಜ್ರಿವಾಲ್ ನೇತೃತ್ವದ ಪಕ್ಷದ ಸರ್ಕಾರದ ಕೆಲಸವನ್ನು ನೋಡಿ ಜನರು ಪಂಜಾಬ್‌ನಲ್ಲಿ ಎಎಪಿಗೆ ತಮ್ಮ ಜನಾದೇಶ ನೀಡಿದ್ದಾರೆ ಎಂದು ಹಿರಿಯ ಎಎಪಿ ನಾಯಕ ಗೋಪಾಲ್ ರೈ ಪ್ರತಿಪಾದಿಸಿದ್ದಾರೆ.

ನಮ್ಮ ದೆಹಲಿ ಮಾದರಿ ಆಡಳಿತ ಹೆಚ್ಚಿನ ಸಂಖ್ಯೆಯ ಮತದಾರರನ್ನು ಸೆಳೆಯುಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ನೇತೃತ್ವದಲ್ಲಿ ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ದೆಹಲಿ ಸರ್ಕಾರ ಮಾಡಿರುವ ಕೆಲಸಗಳು ಸಕಾರಾತ್ಮಕ ಸಂದೇಶ ನೀಡಿದ್ದು, ಪಂಜಾಬ್ ಜನರಲ್ಲಿ ವಿಶ್ವಾಸ ಮೂಡಿಸಿರುವುದಾಗಿ ದೆಹಲಿಯ ಪರಿಸರ ಸಚಿವರೂ ಆಗಿರುವ ಗೋಪಾಲ್ ರೈ ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಸುಖ್ಬೀರ್ ಸಿಂಗ್ ಬಾದಲ್ ಅವರಂತಹ ಎದುರಾಳಿಗೆ ಪ್ರತಿದಾಳಿ ನಡೆಸಿದ್ದ ಕೇಜ್ರಿವಾಲ್, ಜನರಿಗಾಗಿ ಆಸ್ಪತ್ರೆ, ಶಾಲೆ ನಿರ್ಮಿಸಲಾಗುವುದು, ವೃದ್ಧರಿಗೆ ಯಾತ್ರಾ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಕಳೆದ ಏಳು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ, ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ವಿತರಣೆ, ಉಚಿತ ವಿದ್ಯುತ್, ನೀರು, ಮಹಿಳೆಯರಿಗೆ ಉಚಿತ ಬಸ್ ಸೇರಿದಂತೆ ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಅದೇ ರೀತಿಯಲ್ಲಿ ಪಂಜಾಬ್ ನಲ್ಲಿಯೂ ಭರವಸೆ ನೀಡಲಾಗಿತ್ತು ಎಂದು ಅವರು ತಿಳಿಸಿದರು. 

 80ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪಂಜಾಬ್ ನಲ್ಲಿ ಸರ್ಕಾರ ರಚಿಸುತ್ತೇವೆ. ದೆಹಲಿ ಜನರು ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಎಎಪಿ ಮಾತ್ರ ಪ್ರಬಲ ಪಕ್ಷವಾಗಿದೆ. ದೆಹಲಿ ಮಾದರಿಯಲ್ಲಿ ಪಂಜಾಬ್ ನಲ್ಲಿಯೂ ಉಚಿತ ವಿದ್ಯುತ್ ಸೌಲಭ್ಯ ಸೇರಿದಂತೆ ಎಲ್ಲಾ ಸೌಕರ್ಯವಿರುವ  ಶಾಲೆ, ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು ಎಂದು ಗೋಪಾಲ್ ರೈ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com