ಪಂಜಾಬ್ ಶಿವಸೇನಾ ನಾಯಕನ ಹತ್ಯೆ: ಆರೋಪಿ ಸಂದೀಪ್ ಸಿಂಗ್ 7 ದಿನ ಪೊಲೀಸ್ ವಶಕ್ಕೆ

ಶಿವಸೇನಾ(ತಕ್ಸಲಿ) ನಾಯಕ ಸುಧೀರ್ ಸೂರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಶನಿವಾರ ಆದೇಶಿಸಿದೆ.
ಸುಧೀರ್ ಸೂರಿ
ಸುಧೀರ್ ಸೂರಿ

ಅಮೃತಸರ: ಶಿವಸೇನಾ(ತಕ್ಸಲಿ) ನಾಯಕ ಸುಧೀರ್ ಸೂರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಶನಿವಾರ ಆದೇಶಿಸಿದೆ.

ಪ್ರಮುಖ ಆರೋಪಿ ಸಂದೀಪ್ ಸಿಂಗ್(31)ರನ್ನು ಬಿಗಿ ಭದ್ರತೆಯ ನಡುವೆ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಧೀರ್ ಸೂರಿ ಅವರನ್ನು ಶುಕ್ರವಾರ ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ನಗರದ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಮಜಿತಾ ರಸ್ತೆಯಲ್ಲಿರುವ ಗೋಪಾಲ್ ಮಂದಿರದ ನಿರ್ವಹಣೆಯ ವಿರುದ್ಧ ಸೂರಿ ಮತ್ತು ಇತರ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಸೂರಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು  ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com