
ಅಗರ್ತಲಾ: ತ್ರಿಪುರಾದ ದಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಮೂವರು ಸದಸ್ಯರನ್ನು ಮತ್ತು ನೆರೆಹೊರೆಯವರನ್ನು ಕೊಲೆ ಮಾಡಿ ಶವಗಳನ್ನು ಬಾವಿಗೆ ಎಸೆದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಆರೋಪಿ ಬಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಕಮಲ್‌ಪುರ ಉಪವಿಭಾಗದ ನಿವಾಸಿಯಾದ ಬಾಲಕ ನಿತ್ಯ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ತಂದೆ ಇಲ್ಲದಿದ್ದಾಗ ತಾಯಿ, ಅಜ್ಜ, 10 ವರ್ಷದ ಸಹೋದರಿ ಹಾಗೂ ನೆರೆಹೊರೆಯವರನ್ನು ಕೊಂದಿದ್ದಾನೆ. ಅಪರಾಧದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.
ಇದನ್ನು ಓದಿ: ಒಡಿಶಾ ರಾಜಭವನದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನ
ಅಧಿಕಾರಿಯ ಪ್ರಕಾರ, ಬಾಲಕನ ತಂದೆ ಮನೆಗೆ ಬಂದಿದ್ದು, ಎಲ್ಲೆಂದರಲ್ಲಿ ರಕ್ತ ಚಿಮ್ಮಿದ್ದು, ಶವಗಳನ್ನು ಮನೆಯ ಪಕ್ಕದ ಬಾವಿಯಲ್ಲಿ ಬಿಸಾಡಿದ್ದಾರೆ. ತಂದೆ ಕೂಗಾಡಿದ ನಂತರ ಗ್ರಾಮಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆರೋಪಿಯ ಮನೆಯಲ್ಲಿ ಬೆಳಗ್ಗೆ 9.30 ರ ಸುಮಾರಿಗೆ ಜೋರಾಗಿ ಸಂಗೀತ ಹಾಕಿರುವುದು ಕೇಳಿಸಿತು ಎಂದು ಗ್ರಾಮಸ್ಥರು ಹೇಳಿದ್ದಾರೆ ಮತ್ತು ಗಂಟೆಗಳ ನಂತರ ಅವರ ತಂದೆ ಬಾವಿಯಲ್ಲಿ ನಾಲ್ಕು ಶವಗಳನ್ನು ನೋಡಿದ್ದಾರೆ. ಶನಿವಾರ ಸಂಜೆ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement