ತಿರುಪತಿ: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯವು ಕೂಡ ಒಂದು. ತಿರುಪತಿ ತಿಮ್ಮಪ್ಪನ ಆಸ್ತಿ 2.26 ಲಕ್ಷ ಕೋಟಿ ರೂ. ಇದೆ ಎಂದು ಹೇಳಲಾಗಿದೆ.
ಕರ್ನಾಟಕ ಹಾಗೂ ಆಂಧ್ರಪ್ರದೇಶ ಬಜೆಟ್ ಗಾತ್ರದಷ್ಟೇ ಕುಬೇರನಾಗಿರುವ ವೆಂಕಟೇಶ್ವರ ದೇವಸ್ಥಾನದ ಆಸ್ತಿಗೆ ಸಂಬಂಧಿಸಿದಂತೆ ಟಿಟಿಡಿ ಶ್ವೇತಪತ್ರ ಹೊರಡಿಸಿದ್ದು, ದೇವಾಲಯದ ಒಟ್ಟು ಆಸ್ತಿ ಮೌಲ್ಯ 2.26 ಕೋಟಿ ರೂ ಇದೆ ಎಂದು ಘೋಷಿಸಿದೆ.
ದೇಶಾದ್ಯಂತ ಒಟ್ಟು 960 ಕಡೆ 7123 ಎಕರೆ ಭೂಮಿ ಇದೆ, ದೇಗುಲದ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ 15,938 ಕೋಟಿ ರೂ. ಠೇವಣಿ ಇದೆ. ತಿರುಪತಿ ತಿರುಮಲದಲ್ಲಿರುವ ಆಸ್ತಿಯ ಮೌಲ್ಯ 5 ಸಾವಿರ ಕೋಟಿ ರೂ, ವೆಂಕಟೇಶ್ವರ ಸ್ವಾಮಿ ಹೊಂದಿರುವ ಚಿನ್ನದ ದಾಸ್ತಾನು 10.25 ಟನ್ ಎಂದು ಹೇಳಲಾಗಿದೆ.
ಟ್ರಸ್ಟ್ ಹಂಚಿಕೊಂಡ ಬ್ಯಾಂಕ್‌ವಾರು ಹೂಡಿಕೆಯ ಪ್ರಕಾರ, ಟಿಟಿಡಿ 2019 ರಲ್ಲಿ 7339.74 ಟನ್ ಚಿನ್ನದ ಠೇವಣಿ ಹೊಂದಿದೆ ಮತ್ತು ಕಳೆದ ಮೂರು ವರ್ಷಗಳಲ್ಲಿ 2.9 ಟನ್‌ಗಳನ್ನು ಸೇರಿಸಲಾಗಿದೆ.
ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2019ರಲ್ಲಿ 13,025 ಕೋಟಿ ರೂ. ನಿಶ್ಚಿತ ಠೇವಣಿ ಇಡಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಬಳಿಕ ಈ ಠೇವಣಿ ಗಾತ್ರ 15,938 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ ಒಟ್ಟು 2,900 ಕೋಟಿ ರು. ಠೇವಣಿ ಹೆಚ್ಚಳವಾಗಿದೆ.
ದೇವಾಲಯಕ್ಕೆ ಚಿನ್ನವನ್ನು ಕಾಣಿಕೆಯಾಗಿ ನೀಡುವ ಜನರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2019ರಲ್ಲಿ ಟಿಟಿಡಿ 7.3 ಟನ್ ಚಿನ್ನ ಹೊಂದಿತ್ತು. ಇದಕ್ಕೆ ಈಗ ಇನ್ನೂ 2.9 ಟನ್ ಚಿನ್ನ ಸೇರಿಕೊಂಡಿದೆ. ಇದರಿಂದ ಒಟ್ಟಾರೆ ಚಿನ್ನದ ಠೇವಣಿ 10.25 ಟನ್‌ಗೆ ಮೂರೇ ವರ್ಷದಲ್ಲಿ ಏರಿದೆ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಟಿಟಿಡಿಯು 5,309 ಕೋಟಿ ರೂ. ಮೌಲ್ಯದ ಚಿನ್ನವನ್ನು ಠೇವಣಿ ಇಟ್ಟಿದೆ.
Advertisement