ಜಾರ್ಖಂಡ್ ಸಿಎಂ ವಿರುದ್ಧ ತನಿಖೆ ಕೋರಿ ಇಡಿ ಅರ್ಜಿ: ಹೈಕೋರ್ಟ್ ಆದೇಶ ತಳ್ಳಿ ಹಾಕಿದ ಸುಪ್ರೀಂ

ಅನೇಕ  ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿರುದ್ಧ ತನಿಖೆಗೆ ಕೋರಲಾಗಿದ ಇಡಿ ಅರ್ಜಿ ಸ್ವೀಕರಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಇದರಿಂದಾಗಿ ಅವರು ಸ್ವಲ್ವ ನಿರಾಳರಾಗಿದ್ದಾರೆ. 
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್
ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್

ನವದೆಹಲಿ: ಅನೇಕ  ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿರುದ್ಧ ತನಿಖೆಗೆ ಕೋರಲಾಗಿದ ಇಡಿ ಅರ್ಜಿ ಸ್ವೀಕರಿಸುವ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ ತಳ್ಳಿ ಹಾಕಿದೆ. ಇದರಿಂದಾಗಿ ಅವರು ಸ್ವಲ್ವ ನಿರಾಳರಾಗಿದ್ದಾರೆ. 

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಯುಯು ಲಲಿತ್ ಹಾಗೂ ನ್ಯಾಯಾಧೀಶರಾದ ರವೀಂದ್ರ ಭಟ್ ತ್ತು ಸುದಾಂಶು ಧುಲಿಯಾ ಈ ತೀರ್ಪು ನೀಡಿದ್ದಾರೆ. ಆಗಸ್ಟ್ 17, 2022 ರಂದು ಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ಈ ಸಂದರ್ಭದಲ್ಲಿ ಜಾರ್ಖಂಡ್ ಹೈಕೋರ್ಟ್ ಮುಂದೆ ಬಾಕಿ ಉಳಿದಿರುವ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿತ್ತು. ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ ಶಂಕರ್ ಶರ್ಮಾ  ಜೆಎಂಎಂ ನಾಯಕ ತಾವೇ ಗಣಿಗಾರಿಕೆಯನ್ನು ಗುತ್ತಿಗೆ ನೀಡಿರುವುದಾಗಿ ಆರೋಪಿಸಿದ್ದರು. 

ಅಕ್ರಮ ಗಣಿಗಾರಿಕೆ ಕೇಸ್ ನಲ್ಲಿ ಸಿಎಂ ವಿರುದ್ಧದ ತನಿಖೆಗೆ ಅರ್ಜಿ ನಿರ್ವಹಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ರಾಜ್ಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್  ಜೆಎಂಎಂ ನಾಯಕನ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಲ್ಲಿ ಮುಚ್ಚಿದ ಕವರ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವ ಇಡಿ ನಡವಳಿಕೆಯನ್ನು ಸಹ ಪ್ರಶ್ನಿಸಿದ್ದಾರೆ.

ಎರಡು ದಶಕಗಳ ಕುಟುಂಬದ ನಡುವಿನ ದ್ವೇಷದ ಕಾರಣದಿಂದ ಸಿಎಂ  ಗಣಿ ಗುತ್ತಿಗೆ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪರ, ಹಿರಿಯ ವಕೀಲ ಮುಕುಲ್ ರೋಹಟಗಿ ಪ್ರತಿಪಾದಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com