ದೇಶ
ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ- ಹಿಂದೂ ಜನ ಜಾಗೃತಿ ಸಮಿತಿ
ಹಿಂದೂಪರ ಸಂಘಟನೆಗಳ ಪ್ರತಿಭಟನೆಯಿಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಶೋ ಬೆಂಗಳೂರಿನಲ್ಲಿ ರದ್ದು ಆದ ನಂತರ, ಅಮೆರಿಕದಲ್ಲಿ ಆತ ನೀಡಿದ ಭಾರತ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜನ ಜಾಗೃತಿ ಸಮಿತಿ ಶನಿವಾರ ಹೇಳಿದೆ.
ಪಣಜಿ: ಹಿಂದೂಪರ ಸಂಘಟನೆಗಳ ಪ್ರತಿಭಟನೆಯಿಂದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಶೋ ಬೆಂಗಳೂರಿನಲ್ಲಿ ರದ್ದು ಆದ ನಂತರ, ಅಮೆರಿಕದಲ್ಲಿ ಆತ ನೀಡಿದ ಭಾರತ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜನ ಜಾಗೃತಿ ಸಮಿತಿ ಶನಿವಾರ ಹೇಳಿದೆ.
ದಾಸ್ ಶೋ ನಡೆಸುವ ಕಡೆಯಲೆಲ್ಲಾ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜನ ಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಹೇಳಿದ್ದಾರೆ. ಅಮೆರಿಕದಲ್ಲಿ ಭಾರತದ ಬಗ್ಗೆ ಅತ್ಯಂತ ಕೆಟ್ಟದಾಗಿ ವೀರ್ ದಾಸ್ ಹಾಸ್ಯ ಮಾಡಿ ಅವಹೇಳನ ಮಾಡಿದ್ದನು. ಈ ಕಾರಣಕ್ಕಾಗಿ ಮುಂಬೈ ಪೋಲಿಸರು ಇವನ ಮೇಲೆ ಪ್ರಕರಣವನ್ನು ದಾಖಲಿಸಿದ್ದರು.
ಗುರುವಾರ ಬೆಂಗಳೂರಿನಲ್ಲಿ ಆತನ ಶೋ ನಡೆಯಬೇಕಿತ್ತು. ಆದರೆ, ಹಿಂದೂ ಪರ ಸಂಘಟನೆಯ ಪ್ರತಿಭಟನೆಯಿಂದಾಗಿ ಕೊನೆ ಕ್ಷಣದಲ್ಲಿ ಶೋ ರದ್ದಾಗಿತ್ತು. ದಾಸ್ ತನ್ನ ಹೇಳಿಕೆಗಾಗಿ ಕ್ಷಮೆಯಾಚಿಸಬೇಕು, ಒಂದು ವೇಳೆ ಆತ ಕ್ಷಮೆಯಾಚಿಸಿದ್ದಲ್ಲಿ ಈ ವಿಚಾರ ಇಲ್ಲಿಗೆ ಮುಗಿಯುತ್ತದೆ ಎಂದು ಶಿಂಧೆ ಹೇಳಿದ್ದಾರೆ.