ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಿಮಾಚಲ ಪ್ರದೇಶ ಚುನಾವಣೆ 2022: ಶೇ. 65.92ರಷ್ಟು ಮತದಾನ!

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು ಅಂತಿಮವಾಗಿ ಶೇಕಡ 65.92ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು ಅಂತಿಮವಾಗಿ ಶೇಕಡ 65.92ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಹುಮ್ಮಸ್ಸಿನಲ್ಲಿದ್ದರೆ ಚುನಾವಣಾ ಪುನರುಜ್ಜೀವನದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್‌ಗೆ ಇದು ನಿರ್ಣಾಯಕ ಪರೀಕ್ಷೆಯಾಗಿದೆ.

68 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಬೆಳಗ್ಗೆ 8 ಗಂಟೆಗೆ ನಿಧಾನಗತಿಯಲ್ಲಿ ಮತದಾನ ಆರಂಭಗೊಂಡಿದ್ದು, ಬೆಳಗ್ಗೆ 9 ಗಂಟೆಯವರೆಗೆ ಕೇವಲ ನಾಲ್ಕು ಪ್ರತಿಶತದಷ್ಟು ಮತದಾನವಾಗಿತ್ತು. ಬೆಳಗ್ಗೆ 11 ಗಂಟೆಯವರೆಗೆ ಮೊದಲ ಮೂರು ಗಂಟೆಗಳಲ್ಲಿ ಶೇ 17.98ರಷ್ಟು ಮತದಾನವಾಗಿತ್ತು.  

ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆ ಪ್ರತಿಭಾ ಸಿಂಗ್ ಮತ್ತು ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ರಾಂಪುರದಲ್ಲಿ ಮತ ಚಲಾಯಿಸಿದರು. ಅವರು ಶಿಮ್ಲಾದ ಶನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಮಾಜಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್, ಅವರ ಪುತ್ರ ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಇತರ ಕುಟುಂಬ ಸದಸ್ಯರೊಂದಿಗೆ ಹಮೀರ್‌ಪುರದಲ್ಲಿ ಮತ ಚಲಾಯಿಸಿದರು.

ಮಾಜಿ ಕೇಂದ್ರ ಸಚಿವ ಆನಂದ್ ಶರ್ಮಾ ಶಿಮ್ಲಾದಲ್ಲಿ ಮತ ಚಲಾಯಿಸಿದರೆ, ಸಿಎಲ್‌ಪಿ ನಾಯಕ ಮುಖೇಶ್ ಅಗ್ನಿಹೋತ್ರಿ ಮತ್ತು ಅವರ ಕುಟುಂಬ ಹರೋಲಿಯಲ್ಲಿ ಮತ ಚಲಾಯಿಸಿದರು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಅವರ ಪತ್ನಿ ಮಲ್ಲಿಕಾ ನಡ್ಡಾ ಬಿಲಾಸ್‌ಪುರದ ವಿಜಯಪುರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಡಿಸೆಂಬರ್ 8 ರಂದು ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದ ಜೊತೆಗೆ ಹಿಮಾಚಲ ಪ್ರದೇಶದ ಫಲಿತಾಂಶಗಳನ್ನು ಪ್ರಕಟಿಸಲಾಗುವುದು.

Related Stories

No stories found.

Advertisement

X
Kannada Prabha
www.kannadaprabha.com