ಮರಾಠಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಪ್ರಕರಣ: ಎನ್‌ಸಿಪಿ ಶಾಸಕ ಜಿತೇಂದ್ರ ಅವ್ಹಾದ್ ಗೆ ಜಾಮೀನು

ಮರಾಠಿ ಚಿತ್ರ ಹರ್ ಹರ್ ಮಹಾದೇವ್ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎನ್‌ಸಿಪಿ ಶಾಸಕ ಹಾಗೂ ಮಾಜಿ ಸಚಿವ ಜಿತೇಂದ್ರ ಅವ್ಹಾದ್‌ ಹಾಗೂ ಇತರೆ 12 ಆರೋಪಿಗಳಿಗೆ ಥಾಣೆ ನ್ಯಾಯಾಲಯ ಶನಿವಾರ ಜಾಮೀನು...
ಜಿತೇಂದ್ರ ಅವ್ಹಾದ್
ಜಿತೇಂದ್ರ ಅವ್ಹಾದ್

ಮುಂಬೈ: ಮರಾಠಿ ಚಿತ್ರ ಹರ್ ಹರ್ ಮಹಾದೇವ್ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎನ್‌ಸಿಪಿ ಶಾಸಕ ಹಾಗೂ ಮಾಜಿ ಸಚಿವ ಜಿತೇಂದ್ರ ಅವ್ಹಾದ್‌ ಹಾಗೂ ಇತರೆ 12 ಆರೋಪಿಗಳಿಗೆ ಥಾಣೆ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಮಂಗಳವಾರ ಎಫ್‌ಐಆರ್ ದಾಖಲಾಗಿತ್ತು. ಥಾಣೆಯ ವಿವಿಯಾನ ಮಾಲ್ ನಲ್ಲಿ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಮರಾಠಿ ಚಿತ್ರ ಪ್ರದರ್ಶನವನ್ನು ಬಲವಂತವಾಗಿ ಸ್ಥಗಿತಗೊಳಿಸಿದ ಆರೋಪದ ಮೇಲೆ ಇಂದು ಬಂಧಿಸಲಾಗಿತ್ತು.

"ಈ ಚಿತ್ರದಲ್ಲಿ ಮರಾಠರ ಇತಿಹಾಸವನ್ನು ತಿರುಚಲಾಗಿದೆ ಮತ್ತು ಇಂತಹ ಚಲನಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದ ಶಾಸಕರು ಹಾಗೂ ಅವರ ಬೆಂಬಲಿಗರು, ಪ್ರೇಕ್ಷಕರಿಗೆ ಹೊರಹೋಗುವಂತೆ ಕೇಳಿಕೊಂಡಿದ್ದರು. ಈ ವೇಳೆ ಅಲ್ಲಿದ್ದ ಜನರು ಹಾಗೂ ಎನ್‌ಸಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂಬಂಧ ಥಾಣೆ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com