MCD ಚುನಾವಣೆ: ಟಿಕೆಟ್ ನಿರಾಕರಣೆ ವಿರೋಧಿಸಿ ವಿದ್ಯುತ್ ಕಂಬ ಏರಿದ AAP ಮಾಜಿ ಕೌನ್ಸಿಲರ್!

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಟಿಕೆಟ್ ನಿರಾಕರಣೆ ವಿರೋಧಿಸಿ ವಿದ್ಯುತ್ ಕಂಬ ಏರಿದ AAP ಮಾಜಿ ಕೌನ್ಸಿಲರ್
ಟಿಕೆಟ್ ನಿರಾಕರಣೆ ವಿರೋಧಿಸಿ ವಿದ್ಯುತ್ ಕಂಬ ಏರಿದ AAP ಮಾಜಿ ಕೌನ್ಸಿಲರ್

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಕೌನ್ಸಿಲರ್ ಟವರ್ ಏರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಎಎಪಿ ಮಾಜಿ ಕೌನ್ಸಿಲರ್ ಹಸೀಬ್ ಉಲ್ ಹಸನ್ ಅವರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿರುವ ಹಸೀಬ್, ಶಾಸ್ತ್ರಿ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿಯ ವಿದ್ಯುತ್ ಟ್ರಾನ್ಸ್‌ಮಿಷನ್ ಟವರ್ ಏರಿ ಪ್ರತಿಭಟಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹಸೀಬ್ ಅವರನ್ನು ಮನವೊಲಿಸಿ ಟವರ್‌ ಮೇಲಿಂದ ಕೆಳಗಿಳಿಸಿದರು. 

ಡಿಸೆಂಬರ್ 4ರಂದು ನಡೆಯಲಿರುವ ಎಂಸಿಡಿ ಚುನಾವಣೆಗೆ ಶನಿವಾರದಂದು ಅಭ್ಯರ್ಥಿಗಳ ಕೊನೆಯ ಪಟ್ಟಿಯನ್ನು ಎಎಪಿ ಬಿಡುಗಡೆಗೊಳಿಸಿತ್ತು. ಈ ಕುರಿತು ಮಾತನಾಡಿರುವ ಎಎಪಿ ಮಾಜಿ ಕೌನ್ಸಿಲರ್ ಹಸೀಬ್ ಉಲ್ ಹಸನ್, ದೀಪು ಚೌಧರಿಗೆ 3 ಕೋಟಿ ರೂ.ಗೆ ಟಿಕೆಟ್ ಮಾರಿಕೊಂಡಿದ್ದಾರೆ. ನನ್ನ ಬಳಿ ಹಣ ಕೇಳಿದರು. ಆದರೆ ನನ್ನ ಬಳಿ ಅಷ್ಟೋಂದು ಹಣವಿರಲಿಲ್ಲ. ಇಲ್ಲಿ ನಾವು ಮಾಡಿದ ಕೆಲಸಕ್ಕೆ ಬೆಲೆ ಇಲ್ಲ.. ಕೇವಲ ಹಣಕ್ಕೆ ಮಾತ್ರ ಬೆಲೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com