ಮಾಸ್ಕ್ ಧರಿಸದೆ ರಸ್ತೆಯಲ್ಲಿ ನಿಂತಿರುವ ವ್ಯಕ್ತಿ.
ಮಾಸ್ಕ್ ಧರಿಸದೆ ರಸ್ತೆಯಲ್ಲಿ ನಿಂತಿರುವ ವ್ಯಕ್ತಿ.

ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ಇಂದು ಆದೇಶ ಪ್ರಕಟಿಸಿದೆ. 

ನವದೆಹಲಿ: ವಿಮಾನ ಪ್ರಯಾಣದ ವೇಳೆ ಇನ್ನು ಮುಂದೆ ಮಾಸ್ಕ್ ಕಡ್ಡಾಯವಲ್ಲ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ಇಂದು ಆದೇಶ ಪ್ರಕಟಿಸಿದೆ. 

ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಆದರೆ ಆದ್ಯತೆಯಾಗಿ ಪ್ರಯಾಣಿಕರೇ ಅದನ್ನು ಬಳಕೆ ಮಾಡಬೇಕು ಎಂದು ಕೊರೋನಾ ಸೋಂಕು ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಸರ್ಕಾರ ಹೇಳಿದೆ.
 
ಈ ವರೆಗೂ ವಿಮಾನಗಳಲ್ಲಿ ಪ್ರಯಾಣಿಸಲು ಮಾಸ್ಕ್ ಹಾಗೂ ಫೇಸ್ ಕವರ್ ಗಳು ಕಡ್ಡಾಯವಾಗಿತ್ತು. ಪ್ರಯಾಣಕ್ಕೆ ನಿಗದಿಯಾಗಿರುವ ವಿಮಾನಗಳ ಸಂಸ್ಥೆಗಳಿಗೆ ಕಳಿಸಲಾಗಿರುವ ಪ್ರಕಟಣೆಯಲ್ಲಿ, ಮಾಸ್ಕ್ ಕಡ್ಡಾಯಗೊಳಿಸುವುದನ್ನು ಹಿಂಪಡೆಯುತ್ತಿರುವ ನಿರ್ಧಾರವನ್ನು COVID-19 ನಿರ್ವಹಣೆಯ ಪ್ರತಿಕ್ರಿಯೆಗೆ ಸರ್ಕಾರದ ಶ್ರೇಣೀಕೃತ ವಿಧಾನದ ನೀತಿಯ ಭಾಗವಾಗಿ ಕೈಗೊಳ್ಳಲಾಗಿದೆ. ಆದ್ದರಿಂದ ವಿಮಾನದ ಒಳಗಿನ ಪ್ರಕಟಣೆಯಲ್ಲಿ, ಪ್ರಯಾಣಿಕರು ತಮ್ಮ ಆಯ್ಕೆಯಿಂದ ಮಾಸ್ಕ್ ಧರಿಸುವುದು ಸೂಕ್ತ ಎಂಬುದಾಗಿ ಹೇಳಬೇಕೆಂದು ಸಚಿವಾಲಯ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com