ಗೋ ಕಳ್ಳಸಾಗಣೆ ಪ್ರಕರಣ: ಟಿಎಂಸಿ ಪ್ರಭಾವಿ ವ್ಯಕ್ತಿ ಅನುಬ್ರತಾ ಮೊಂಡಲ್ ರನ್ನು ಬಂಧಿಸಿದ ಇಡಿ!

ಗೋ ಕಳ್ಳಸಾಗಣೆಯಿಂದ ಬಂದಿರುವ ಶಂಕಿತ ಹಣವನ್ನು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಬಲ ವ್ಯಕ್ತಿ ಅನುಬ್ರತಾ ಮೊಂಡಲ್ ರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. 
ಅನುಬ್ರತಾ ಮೊಂಡಲ್
ಅನುಬ್ರತಾ ಮೊಂಡಲ್

ಕೋಲ್ಕತ್ತಾ: ಗೋ ಕಳ್ಳಸಾಗಣೆಯಿಂದ ಬಂದಿರುವ ಶಂಕಿತ ಹಣವನ್ನು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಬಲ ವ್ಯಕ್ತಿ ಅನುಬ್ರತಾ ಮೊಂಡಲ್ ರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. 

ಇಂದು ಪ್ರಕರಣ ಸಂಬಂಧ ಅಸನ್ಸೋಲ್ ಜೈಲಿನಲ್ಲಿ ಅನುಬ್ರತಾ ಮೊಂಡಲ್ ರನ್ನು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ಅವರನ್ನು ಬಂಧಿಸಿದೆ. ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಂಡಲ್ ಸಿಬಿಐ ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

'ಮೊಂಡಲ್ ಅವರು ಇಂದು ರಾತ್ರಿ ಜೈಲಿನಲ್ಲಿ ಕಳೆಯಲಿದ್ದು ನಾಳೆ ಇಡಿ ಅಸನ್ಸೋಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಕಸ್ಟಡಿ ವಿಚಾರಣೆಯನ್ನು ಕೋರಲಿದೆ. ಇನ್ನು ನಾವು ಅವರನ್ನು ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲು ಮನವಿ ಮಾಡುತ್ತೇವೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಂಡಲ್ ಅವರ ಪುತ್ರಿ ಸುಕನ್ಯಾ ನೀಡಿದ ಹೇಳಿಕೆಗಳ ಆಧಾರದ ಮೇಲೆ ಮೊಂಡಲ್ ಅವರನ್ನು ಬಂಧಿಸಲಾಗಿದೆ ಎಂದು ಕೇಂದ್ರೀಯ ಸಂಸ್ಥೆಯ ಮೂಲಗಳು ತಿಳಿಸಿವೆ. 'ಮೊಂಡಲ್ ಅವರ ಮಗಳ ಹೆಸರಿನಲ್ಲಿ ಭಾರಿ ಮೊತ್ತವನ್ನು ಠೇವಣಿ ಮಾಡಿರುವುದು ಪತ್ತೆಯಾಗಿದೆ. ಅಲ್ಲದೆ, ಸುಕನ್ಯಾ ಅವರ ಹೆಸರಿನಲ್ಲಿ ಹಲವಾರು ಆಸ್ತಿಗಳನ್ನು ದಾಖಲಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಸುಕನ್ಯಾ ಹಣದ ಮೂಲವನ್ನು ವಿವರಿಸಲು ವಿಫಲರಾಗಿದ್ದಾರೆ. ಮೊಂಡಲ್ ಆದಾಯವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಇಡಿ ಅಧಿಕಾರಿ ತಿಳಿಸಿದ್ದಾರೆ.

ಮೊಂಡಾಲ್ ಅವರ ಅಕ್ರಮ ಹಣ ವರ್ಗಾವಣೆಯ ಬಗ್ಗೆ ವಿವರಿಸಿದ ಇಡಿ ಅಧಿಕಾರಿ, ಸುಕನ್ಯಾ ಹೆಸರಿನಲ್ಲಿ 18 ಲಕ್ಷ ಸ್ಥಿರ ಠೇವಣಿ ಮತ್ತು ಅವರ ಹೆಸರಿನಲ್ಲಿ ಅಕ್ಕಿ ಗಿರಣಿ ಇರುವುದು ಸಿಬಿಐ ಪತ್ತೆ ಮಾಡಿದೆ. ಜೊತೆಗೆ ಅವರ ಹೆಸರಿನಲ್ಲಿ ಹಲವಾರು ಆಸ್ತಿಗಳು ದಾಖಲಾಗಿವೆ. ನಾವು ಮೂಲವನ್ನು ತಿಳಿದುಕೊಳ್ಳಬೇಕಾಗಿದೆ. ಹಣ ಮತ್ತು ಆದ್ದರಿಂದ ನಮ್ಮ ವಶದಲ್ಲಿರುವ ಮೊಂಡಲ್ ಅವರ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com