ಅಂತರ್ಧರ್ಮೀಯ ವಿವಾಹ: ಮಹಿಳೆಯನ್ನು ಗುಂಡಿಕ್ಕಿ ಹತ್ಯೆಗೆ ಯತ್ನ; ಮೂವರ ಬಂಧನ

ಅಂತರ್ಧರ್ಮೀಯ ವಿವಾಹ ಮಾಡಿಕೊಂಡಿದ್ದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ. 
ಗುಂಡಿಕ್ಕಿ ಹತ್ಯೆ (ಸಂಗ್ರಹ ಚಿತ್ರ)
ಗುಂಡಿಕ್ಕಿ ಹತ್ಯೆ (ಸಂಗ್ರಹ ಚಿತ್ರ)
Updated on

ಜೈಪುರ: ಅಂತರ್ಧರ್ಮೀಯ ವಿವಾಹ ಮಾಡಿಕೊಂಡಿದ್ದ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ. 

ಜೈಪುರದ ಲಕ್ಷ್ಮಿ ನಗರದಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ದಾಳಿ ನ.23 ರಂದು ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಶೂಟಿಂಗ್ ಪ್ರಕರಣದ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

ಸಂತ್ರಸ್ತೆಯನ್ನು ಅಂಜಲಿ ವರ್ಮಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿಯ ಸಹೋದರ ಅಬ್ದುಲ್ ಅಜೀಜ್ ಆಕೆಯನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ. ಅಂಜಲಿ ಹೇಳಿಕೆಯ ಆಧಾರದಲ್ಲಿ ಅಬ್ದುಲ್ ಅಜೀಜ್ ಹಾಗೂ ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಅಂಜಲಿಯ ಪತಿಯ ಸಹೋದರನ ಸ್ನೇಹಿತರಾದ ಮೊಹಮ್ಮದ್ ರಾಜ, ರಾಜು, ಶೂಟರ್ ಕಲೀಮ್ (ಬಿಹಾರದ ನಿವಾಸಿ) ನ್ನು ಜೈಪುರ ಬಂಧಿಸಲಾಗಿದೆ ಎಂದು ಡಿಸಿಪಿ ವಂದಿತಾ ರಾಣಾ ಹೇಳಿದ್ದಾರೆ. ಆರೋಪಿ ಕಲೀಮ್ ನಿಂದ ಪೊಲೀಸರು ಪಿಸ್ತೂಲ್ ನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿ ಅಬಿದ್ ಗಾಗಿ ಹುಡುಕಲಾಗುತ್ತಿದೆ ಎಂದು ಡಿಸಿಪಿ ವಂದಿತಾ ರಾಣ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com