5 ಬಾರಿ ಸಿಟ್-ಅಪ್‌ ಮಾಡಿಸಿ ಅತ್ಯಾಚಾರ ಆರೋಪಿಯನ್ನು ಬಿಟ್ಟು ಕಳುಹಿಸಿದ ಬಿಹಾರ ಪಂಚಾಯಿತಿ

ಅತ್ಯಾಚಾರ ಆರೋಪಿಗೆ ಶಿಕ್ಷೆಯಾಗಿ ಐದು ಬಾರಿ ಸಿಟ್-ಅಪ್ ಮಾಡಲು ಆದೇಶಿಸಿದ ನಂತರ ಆರೋಪಿಯನ್ನು ಬಿಟ್ಟು ಕಳುಹಿಸಿರುವ ಆಘಾತಕಾರಿ ಘಟನೆಯೊಂದು ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವಾಡ: ಅತ್ಯಾಚಾರ ಆರೋಪಿಗೆ ಶಿಕ್ಷೆಯಾಗಿ ಐದು ಬಾರಿ ಸಿಟ್-ಅಪ್ ಮಾಡಲು ಆದೇಶಿಸಿದ ನಂತರ ಆರೋಪಿಯನ್ನು ಬಿಟ್ಟು ಕಳುಹಿಸಿರುವ ಆಘಾತಕಾರಿ ಘಟನೆಯೊಂದು ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅದೇ ಗ್ರಾಮದ ಆರೋಪಿಗೆ 5 ಬಾರಿ ಸಿಟ್-ಅಪ್‌ ಮಾಡಿಸಿ ಬಿಟ್ಟು ಕಳುಹಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂರು ದಿನಗಳ ಹಿಂದೆ, ಈ ವಿಷಯದಲ್ಲಿ ಪಂಚಾಯಿತಿ ಕರೆಯಲಾಗಿತ್ತು. ಪಂಚಾಯತ್ ಮುಖ್ಯಸ್ಥ ಅಥವಾ ಸ್ಥಳೀಯವಾಗಿ ಮುಖಿಯಾ ಎಂದು ಕರೆಯಲ್ಪಡುವ ವ್ಯಕ್ತಿಯು, ಆರೋಪಿ ಯುವಕನಿಗೆ ಅತ್ಯಾಚಾರಕ್ಕೆ ಶಿಕ್ಷೆಯಾಗಿ ಐದು ಬಾರಿ ಸಿಟ್-ಅಪ್ ಮಾಡಲು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, 'ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಯುವಕನನ್ನು ಗ್ರಾಮ ಪಂಚಾಯಿತಿಗೆ ಕರೆದು ಐದು ಬಾರಿ ಸಿಟ್ ಅಪ್ ಮಾಡಿಸಿ ವಿಷಯ ಇತ್ಯರ್ಥಪಡಿಸಲಾಗಿದೆ.

'ಯುವಕ ಸಿಟ್-ಅಪ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ' ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗೆ ಲಘು ಶಿಕ್ಷೆ ನೀಡುವ ಮೂಲಕ ಅತ್ಯಾಚಾರ ಪ್ರಕರಣವನ್ನು ಇತ್ಯರ್ಥಪಡಿಸಿದ ಪಂಚಾಯಿತಿ ನಿರ್ಧಾರಕ್ಕೆ  ನೆಟಿಜನ್‌ಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ವೀಡಿಯೊದ ಆಧಾರದ ಮೇಲೆ, ನವಾಡಾ ಎಸ್ಪಿ ಆದೇಶದ ಮೇರೆಗೆ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com