ಶ್ರದ್ಧಾ ಹತ್ಯೆ ಪ್ರಕರಣ: ಅಫ್ತಾಬ್ ಪೂನಾವಾಲಾಗೆ 14 ದಿನಗಳ ನ್ಯಾಯಾಂಗ ಬಂಧನ

ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಶ್ರದ್ಧಾ ವಾಕರ್-ಅಫ್ತಾಬ್
ಶ್ರದ್ಧಾ ವಾಕರ್-ಅಫ್ತಾಬ್
Updated on

ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. 

ಇದಕ್ಕೂ ಮುನ್ನ ಅಫ್ತಾಬ್ ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿ ಆತನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ದೆಹಲಿ ಪೊಲೀಸ್ ತಂಡವು ನಾರ್ಕೋ ಪರೀಕ್ಷೆಯ ಮೊದಲು ಕಾರ್ಯವಿಧಾನಕ್ಕಾಗಿ ಅಫ್ತಾಬ್‌ನನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನ್ಯಾಯಾಂಗ ಬಂಧನ ಹಿನ್ನೆಲೆ ಅಫ್ತಾಬ್ ನನ್ನು ತಿಹಾರ್ ಜೈಲಿಗೆ ಕಳುಹಿಸಲಾಗುತ್ತದೆ.

ಶ್ರದ್ಧಾ ಕೊಲೆ ಪ್ರಕರಣದ ನಿಗೂಢತೆ ಇನ್ನೂ ಕಗ್ಗಂಟಾಗಿದೆ. ಆರೋಪಿ ಅಫ್ತಾಬ್ ತನ್ನ ಅಪರಾಧವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರೂ, ನ್ಯಾಯಾಲಯದಲ್ಲಿ ಅಫ್ತಾಬ್ ತಪ್ಪಿತಸ್ಥನೆಂದು ಸಾಬೀತುಪಡಿಸಲು ದೆಹಲಿ ಪೊಲೀಸರಿಗೆ ಅಂತಹ ಪುರಾವೆಗಳು ಇನ್ನೂ ಸಿಕ್ಕಿಲ್ಲ.

ಶ್ರದ್ಧಾ ಹತ್ಯೆ ದೆಹಲಿಯಲ್ಲಿ ನಡೆದಿದ್ದರೂ ಸಂಪೂರ್ಣ ಸಂಚು ಹಿಮಾಚಲದಲ್ಲಿ ನಡೆದಿದೆ ಎಂದು ದೆಹಲಿ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಪರಿಹರಿಸಲು ದೆಹಲಿ ಪೊಲೀಸರು ಐದು ರಾಜ್ಯಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮುಂಬೈನಲ್ಲಿರುವ ಶ್ರದ್ಧಾ ಮತ್ತು ಅಫ್ತಾಬ್ ಅವರ ಆಪ್ತ ಸ್ನೇಹಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಲ್ಲೂ ಗುರುಗ್ರಾಮದಲ್ಲಿ ಶ್ರದ್ಧಾ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳಿಗಾಗಿ ಪೊಲೀಸರು ಹಲವು ಬಾರಿ ಶೋಧ ನಡೆಸಿದ್ದಾರೆ.

ಶ್ರದ್ಧಾಳನ್ನು ಕೊಂದು ಶವವನ್ನು 35 ತುಂಡುಗಳಾಗಿ ಕತ್ತರಿಸಿರುವುದಾಗಿ ವಿಚಾರಣೆ ವೇಳೆ ಅಫ್ತಾಬ್ ತಿಳಿಸಿದ್ದಾನೆ. ಅದರ ನಂತರ, ಮೃತದೇಹದ ತುಂಡುಗಳನ್ನು ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದನು. ಅಫ್ತಾಬ್ ಉಲ್ಲೇಖಿಸಿರುವ ಸ್ಥಳಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ನಡೆಸಿದರು. ಆದರೆ ಇನ್ನೂ ಹೆಚ್ಚಿನ ನಿಖರವಾದ ಪುರಾವೆಗಳು ಸಿಗಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com