ಉತ್ತರ ಪ್ರದೇಶ: ಶ್ರದ್ಧಾ ವಾಕರ್ ಹತ್ಯೆಯನ್ನು ಬೆಂಬಲಿಸಿದ್ದ ವ್ಯಕ್ತಿ ಬಂಧನ!
ದೆಹಲಿಯ ಬುಲಂದ್ ಶಹರ್ ನಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಬೆಂಬಲ ವ್ಯಕ್ತಪಡಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
Published: 25th November 2022 09:09 PM | Last Updated: 25th November 2022 09:09 PM | A+A A-

ಬಂಧಿತ ಆರೋಪಿ ವಿಕಾಸ್ ಕುಮಾರ್
ಲಖನೌ(ಉತ್ತರ ಪ್ರದೇಶ): ದೆಹಲಿಯ ಬುಲಂದ್ ಶಹರ್ ನಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾಗೆ ಬೆಂಬಲ ವ್ಯಕ್ತಪಡಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿಯಲ್ಲಿ ಯೂಟ್ಯೂಬರ್‌ನೊಂದಿಗೆ ಮಾತನಾಡಿದ್ದ ಯುವಕ, ಅಫ್ತಾಬ್ ಶ್ರದ್ಧಾಳನ್ನು ಕೊಂದು 35 ತುಂಡುಗಳಾಗಿ ತುಂಡರಿಸಿದ್ದಕ್ಕೆ ಬೆಂಬಲ ವ್ಯಕ್ತಪಡಿಸಿದ್ದನು. ತನ್ನನ್ನು ರಶೀದ್ ಖಾನ್ ಎಂದು ಪರಿಚಯಿಸಿಕೊಂಡಿದ್ದನು. ಈ ವಿಡಿಯೋ ವೈರಲ್ ಆಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದು ಆಗ ಆತನ ನಿಜ ಹೆಸರು ವಿಕಾಸ್ ಕುಮಾರ್ ಎಂದು ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಈ ಮಾಹಿತಿ ನೀಡಿದ್ದಾರೆ
ಈ ಬಗ್ಗೆ ಮಾಹಿತಿ ನೀಡಿದ ಬುಲಂದ್‌ಶಹರ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್, ವಿಕಾಸ್ ಅವನ ಸಂದರ್ಶನದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸ್ ತಂಡಕ್ಕೆ ಒತ್ತಡಗಳು ಹೆಚ್ಚಿತ್ತು. ರಶೀದ್ ಖಾನ್ ಎಂದು ಹೇಳಿಕೊಳ್ಳುವ ವ್ಯಕ್ತಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್: ಆಫ್ತಾಬ್ ವಾಸಿಸುತ್ತಿದ್ದ ಪ್ಲಾಟ್ ನಿಂದ 5 ಚಾಕುಗಳು ಪೊಲೀಸರ ವಶಕ್ಕೆ, ಎಫ್ ಎಸ್ ಎಲ್ ಗೆ ರವಾನೆ
ಶ್ರದ್ಧಾ ವಾಕರ್ ಅವರ ಲೈವ್-ಇನ್ ಪಾಲುದಾರ ಅಫ್ತಾಬ್ ಪೂನಾವಾಲಾನನ್ನು ನವೆಂಬರ್ 12ರಂದು ಬಂಧಿಸಲಾಯಿತು. ಆರೋಪಿ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದರು. ಹಲವು ದಿನಗಳ ಕಾಲ ದೇಹದ ಭಾಗಗಳನ್ನು ಫ್ರಿಡ್ಜ್ ನಲ್ಲಿಟ್ಟು ದೆಹಲಿಯ ವಿವಿಧ ಸ್ಥಳಗಳಲ್ಲಿ ಒಂದೊಂದಾಗಿ ಬಿಸಾಡಿದ್ದನು.
सोशल मीडिया के माध्यम से दिल्ली में बना एक वीडियो संज्ञान में आया था जिसमें एक व्यक्ति द्वारा स्वयं को बुलन्दशहर का निवासी बताते हुए आप्पत्तिजनक टिप्पणी की थी प्रकाश में आये अभियुक्त को थाना सिकन्द्राबाद पुलिस द्वारा गिरफ्तार किया गया है इस सम्बन्ध मे वरिष्ठ पुलिस अधीक्षक की बाइट pic.twitter.com/AyTLBvdTgu
— Bulandshahr Police (@bulandshahrpol) November 25, 2022